ಮನದ ದುಗುಡವನ್ನೆಲ್ಲ ಒಂದೆಡೆಗೆ ಬಚ್ಚ್ಚಿಟ್ಟು ಬಂದಿರುವೆ.. ನಿನ್ನ ಮದುವೆಗೆಂದು.. ನಿನಗೆ ಹರಸಲೆಂದು…


pic14

ಚಿನ್ನು..ನೋಡು ರೆಡಿ ಆಗ್ತಿದ್ದೇನೆ ನಿನ್ನ ಮದುವೆಗೆ ಬರಲೆಂದೇ..ನೀ ಕೊಡಿಸಿದ ಬಟ್ಟೆಯನ್ನೇ ಹಾಕಿಕೊಂಡಿದ್ದೇನೆ ಹೇಗೆ ಕಾಣಿಸುತ್ತಿದ್ದೇನೆ ಹೇಳುತ್ತಿಯ? ನಿನಗೆ ಮಾಡಿದ್ದ ಪ್ರಮಾಣನ ಉಳಿಸಿಕೊಲ್ಲೋದಕ್ಕೊಸ್ಕರ ನನ್ನ ಮನದ ದುಗುಡವನ್ನೆಲ್ಲ ಬಚ್ಚ್ಚಿಟ್ಟು ಬರಲು ತಯಾರಿದ್ದೇನೆ..ಚಿನ್ನು.. ಯಾವಗಲೂ ನಾನು ಕನ್ನಡಿ ಮುಂದೆ ಬಂದು ನಿಂತರೆ ಸಾಕು ನನ್ನ ನಾಚಿ ನೀರಾಗುವಂತೆ ಮಾಡುತ್ತಿದ್ದ ನೀನು ನಿನ್ನ ಕಲ್ಪನೆಗಳು. ಇಂದು ಯಾಕೋ ನೀ ಇಲ್ಲದೆ ವ್ಯತೆಯೇ ತುಂಬಿದೆಯಲ್ಲ..ಪ್ರತಿ ನಿತ್ಯ ಕನ್ನಡಿಯಲ್ಲಿ ಮೊಗವ ನೋಡಿದರೆ ಅರಳಿನಿಂತಿರುತ್ತಿತ್ತು ಇಂದು ನೊಡುತ್ತಿದ್ದರೆಯಾಕೋ ಮೊಗ,ಮನಸ್ಸೆಲ್ಲ ಬಾಡಿ ಹೋಗಿದೆ ಅಂತ ಅನಿಸುತಿಹುದು..ನಿನಗೆ ಗೊತ್ತ ರಾತ್ರಿ ಎಲ್ಲ ನನ್ನ ಕಣ್ಣಿಗೆ ನಿದ್ರೆ ಹತ್ತಲೇ ಇಲ್ಲ..ಅದೆಷ್ಟು ಅತ್ತೇನೋ ನಿನಗಾಗಿ..ಅದಕ್ಕೆ ಆ ಕಣ್ಣ ಹನಿಗಳೇ ಸಾಕ್ಷಿ ..!!

ನಾನು ಇಂದು ನನ್ನ ಗೆಳತಿಯೊಡನೆ ಬರುತ್ತಿದ್ದೇನೆ ನಿನ್ನ ಮದುವೆಗೆಂದು! ಮನದಲ್ಲಿ ಸಾಗರದಷ್ಟು ನೋವಿದ್ದರೂ ಎಲ್ಲವೂ ನುಂಗಿ ಬಸ್ ಹತ್ತಿ ಹೊರಟೆ ಬಿಟ್ಟೆ..ಆ ಬಸ್ ಬಂದು ನಿಂತಿದ್ದು ನಿನ್ನ  ಮದುವೆ ನಡೆಯುವ ಛತ್ರದ ಎದುರು..ಅಲ್ಲಿವರೆಗೆ ಸ್ವಲ್ಪ ಧೈರ್ಯದಿಂದಿದ್ದ ನನಗೆ ಭಯ ಶುರುವಾಯಿತು..ಬಸ್ ಇಳಿಯುತ್ತಿದ್ದಂತೆ ವಾಲಗದ ಶಬ್ದ ಕೇಳಿಸಿತು ನನ್ನದನ್ನ ನನ್ನ  ಚಿನ್ನುವನ್ನ ಕಳೆದುಕೊಳ್ಳುವ ಕ್ಷಣಗಳು ಹತ್ತಿರವಾಗುತ್ತಿದೆಯಲ್ಲ ಎಂಬ ವೇದನೆಯ ಹೊತ್ತು ಕಾಲೆಳೆದು ನಡೆದೇ ಮುಂದೆ..

ಇನ್ನೇನು ಮದುವೆ ಮನೆಗೆ ಕಾಲಿಡಬೇಕು ಅನ್ನೋಷ್ಟರಲ್ಲಿ ನಿನ್ನ್ನ ಹಾಗು ನಿನ್ನ ಭಾವಿ ಪತ್ನಿಯ ಹೆಸರಿರುವ ಫಲಕ ಕಾಣಿಸಿತು..ನಾನು ಅಂದುಕೊಂಡಿದ್ದೆ ಒಂದಲ್ಲ ಒಂದು ದಿನ ನಿನ್ನ ಹೆಸರಿನೊಡನೆ ನನ್ನ ಹೆಸರ ಫಲಕ ಹೀಗೆ ತೂಗಬಹುದೆಂದು ಆದರೆ ಆ ಆಶಾಗೋಪುರ ಇಂದು ಕುಸಿದು ಬಿದ್ದಿದೆ..ಅದನ್ನೂ ಸಹಿಸಿ ಮುಂದೆ ನಡೆದೇ ಮದುವೆ ಮನೆಗೆ ಕಾಲಿಟ್ಟೆ ಎದುರಿಗೇ ಹಸೆಮಣೆಯ ಮೇಲೆ ನೀ ನಗುತ ಕುಳಿತಿದ್ದೆ ನಿನ್ನ ಮುಂದಾಗುವ  ಒಡತಿಯೊಡನೆ..ಏನೋ ಹಿಂಸೆ ಕಳವಳ ನನ್ನ  ಕಾಡುತ್ತಿತ್ತು  ಚಿನ್ನು..ಮನದಲ್ಲೇ ಸಂಭಾಷಣೆ ಶುರುವಾಗಿತ್ತು..ಯಾಕೆ ಹೀಗೆ ಮಾಡಿದೆ ಚಿನ್ನು ..ನೀ ನನಗೆ ತಾಳಿ ಕಟ್ಟಬಹುದಿತ್ತಲ್ಲವೆ? ಹೀಗೆ ನೂರಾರು ಪ್ರಶ್ನೆಗಳಿಗೆ ಉತ್ತರವಿಲ್ಲದೆ ನಿನ್ನ ನೋಡುತ್ತಾ ಕುಳಿತೆ..ನನ್ನ ಮನದಲ್ಲಿ ಸ್ಮಶಾನ ಮೌನವಡಗಿ ಕುಳಿತಿತ್ತು..ಕಣ್ಣಲ್ಲಿ ನೀರು ಬಂದರು ಒತ್ತಿಟ್ಟು ಕುಳಿತಿರುವೆ ನಿನಗಾಗಿ!ನನ್ನ ಗೆಳತಿಯ ಕೈ ಹಿಡಿದೆ ಕುಳಿತಿದ್ದೆ.. ಏನು ಮಾತನಾಡಲೂ ತೋಚುತ್ತಿಲ್ಲ ಬರಿ ಪ್ರಶ್ನೆಗಳೇ..ಇಷ್ಟು ದಿನ ನೀ ಪ್ರೀತಿಸಿದ್ದು ನಿನ್ನ ಮದುವೆಯ ನಾನು ಕಣ್ಣು ತುಂಬಾ ನೋಡಲೆಂದೇ? ನಿನ್ನೊಡನೆ ಕಳೆದ ಸವಿ ಕ್ಷಣಗಳು ಕಣ್ಣ ಮುಂದೆ ಬಂದು ಹಿಮ್ಸಿಸುತ್ತಿದೆ..ಆದರೂ ನಿನಗೆ ಮಾಡಿದ ಪ್ರಮಾಣವ ಉಳಿಸಿಕೊಳ್ಳಲು ಎಲ್ಲವೂ ಸಹಿಸಿ ಕುಳಿತಿದ್ದೇನೆ..ನೋಡ ನೋಡುತ್ತಲೇ ಯಾವುದೊ ಶುಭ ಗಳಿಗೆಯಲ್ಲಿ ನೀ ಅವಳಿಗೆ ತಾಳಿ ಕಟ್ಟುಬಿಟ್ಟೆ ..ಆ ತಾಳಿ ಕಟ್ಟುವಾಗ ಒಮ್ಮೆ ನಿನ್ನ ಮನಸಲ್ಲಿ ನನ್ನ ಬಗ್ಗೆ ಏನಾದರೂ ಯೋಚನೆ ಬಂದಿತೇ? ಅದೆಷ್ಟು ಕುಶಿ ಇಂದ ಇದ್ದೀಯ ಚಿನ್ನು..ಒಂದು ಕಡೆ ನನಗೆ ನೀ ಕುಶಿ ಇಂದಿರುವೆ ಎಂಬ ಕುಶಿ ಇನ್ನೊಂದೆಡೆ..ನಿನ್ನ ಕಳೆದುಕೊಲ್ಲುವೆನೆಂಬ ನೋವು..ಕಾಡುತ್ತಿತ್ತು..ಎಲ್ಲರೂ ಮುಯ್ಯಿ ಕೊಡಲು ಸ್ಟೇಜ್ ಹತ್ತಿರ ಸಾಗತೊಡಗಿದರು..ನನಗೆ ಮೈ ಮೇಲೆ ಪ್ರಜ್ಞೆಯೇ ಇರಲಿಲ್ಲ ವೆಂಬಂತೆ ಇದ್ದೆ..ಯಾಕೋ ನಿನ್ನ ಹತ್ತಿರ ಬರುತ್ತಿದ್ದಂತೆ ಕೈ ಕಾಲು ನಡುಕ ಶುರುವಾಯಿತು..ಅದು ಮೊದಲ ಅನುಭವ..ನನ್ನ ಜೀವನದಲ್ಲಿ ಎಂದು ಅಷ್ಟು ನೋವಿನಾಳಕ್ಕೆ ನಾನು ಹೋಗಿರಲಿಲ್ಲ..ಇದೆ ಮೊದಲ ಬಾರಿ..ಈ ರೀತಿಯಾದ ಹಿಂಸೆ ಶುರುವಾಯಿತು.. ಆಗಲಾದರೂ ನೀ ನನ್ನ ಕನ್ನುಗಲೊಡನೆ ನನ್ನ ಕಣ್ಣುಗಳ ಬೇರೆಸುವೆಯೇನೋ ಎಂಬ ಪುಟ್ಟ ಆಸೆಯ ಹೊತ್ತು ನಿನ್ನನ್ನೇ ನನ್ನೆರಡೂ ಕಣ್ಣುಗಳಲಿ ಮುಗ್ಧತೆ ಇಂದ ನೋಡತೊಡಗಿದೆ..ಮೊದಲು ನನ್ನ ಕಂಬನಿಗಳು ಹರಿಯತೋದಗಿದರೆ ಮುತ್ತಿಟ್ಟು ಒರೆಸುತ್ತಿದ್ದ ನೀನು ಇಂದು ನಾ ಕಂಬನಿಗೈದರೂ ಕಂಡೂ ಕಾಣದವನಂತೆ ನಗುತ್ತಿದ್ದಿಯ ..ಯಾಕೆ ಅಂತ ಕೇಳಬಹುದೇ ? ನಿನಗಾಗಿ  ನಾನೇ ಕೈಯ್ಯಾರೆ ಬಿಡಿಸಿರುವ ಕಲಾಗುಚ್ಚವ ತಂದಿದ್ದೇನೆ ಉಡುಗೊರೆಯಾಗಿ ನೀಡಲು..ಅದರಲ್ಲಿ ಅದೆಷ್ಟು ಪ್ರೀತಿ ತುಂಬಿ ಬಿಡಿಸಿದ್ದೇನೆ ಎಂಬುದು ನನಗೆ ಗೊತ್ತು! ಸಾದ್ಯವಾದರೆ ನೀನು ಅದನ್ನು ಹುಡುಕಲು ಪ್ರಯತ್ನಿಸು ..ಅಂತು ಇಂತೂ ನಾ ನಿಂತಿದ್ದ ಸಾಲು ನಿನ್ನ ಸನಿಹಕ್ಕೆ ಬಂದೆ ಬಿಟ್ಟಿತು..ಮನದ ದುಗುಡವು ಲಾವರಸದಂತೆ ಚಿಮ್ಮಲೆ ಬೇಕಾದ ಕ್ಷಣ….. ಹತ್ತಿರವಾಗುತ್ತಿತ್ತು..ನಿನಗೆ ಹರಸೋಣ ಎಂದರೂ ಬಾಯಲ್ಲಿ ಮಾತುಗಳು ಹೊರಡುತ್ತಿಲ್ಲ..ತುಟಿಗಳೇನೋ ಆಡುತ್ತಿದ್ದವು ಆದರೆ ಸ್ವರವೆಲ್ಲೋ ಮಾಯವಾಗಿ ಹೋಗಿತ್ತು.. ನಿನ್ನ ಕೈಗೆ ನನ್ನ ಪ್ರೀತಿಯ ಉಡುಗೊರೆಯ ಇತ್ತು.. ಇಟ್ಟ ಮುಂದಿನ ಹೆಜ್ಜೆಯಲ್ಲೇ ಲಾವರಸವು(ನೋವು) ಭೋರ್ಗರೆಯತೊಡಗಿತು..ಕೈ ಕಾಲುಗಳೋ  ಇನ್ನು ನಡುಗುತಲಿದ್ದವು.. ನಿನ್ನ ಹಿಂದೆ ಸಹಾ ತಿರುಗಿ ನೋಡದೆ ಹೊರಟೆ..ಅಂತಹ ಭಯಂಕರ ಯಾತನೆ..ನನ್ನ ಗೆಳತಿ ಊಟದ ಕೊಠಡಿಗೆ ಕರೆಧೋಯ್ದಳು ಎಂದು ತಿಳಿದಿದ್ದು ಅವರು ಎಲೆ ಹಾಕಲು ಬಂದಾಗಲೇ..ನಾನು ಯಾವುದೋ ತೀಕ್ಷ್ನತೆಯಲ್ಲಿ ಅಂದಕಾರದಲ್ಲಿ ತಲ್ಲಿನಳಾಗಿ ಹೋಗಿದ್ದೆ..ನನಗೆ ಗೊತ್ತಿದ್ದೂ ಇಷ್ಟೇ ನನ್ನ ಗೆಳತಿ ಊಟ ಮಡಿ ನನ್ನ ಎಚ್ಹರಿಸಿದಾಗ ಎಲೆಯಲ್ಲಿ ಮೊದಲು ಏನಿತ್ತು ಹೋಗಿದ್ದರೋ ಅದೆಲ್ಲವೂ ಚಾಚು ತಪ್ಪದೆ ಅಲ್ಲೇ ಕುಳಿತು ನಗುತ್ತಿದ್ದವು.. ನನ್ನ ವ್ಯತೆ ಅದಕ್ಕೆ ಹೇಗೆ ತಿಳಿದೀತು ..ಅಲ್ಲವೆ ಚಿನ್ನು? ಕೈ ತೊಳೆದು..ತಾಮ್ಬೂಲವ ಹೊತ್ತು..ನೋಡಿದವರಿಗೆ ಕಿರು ನಗೆ ಕೊಟ್ಟು ಮದುವೆ ಮನೆ ಇಂದ ಹೊರಗೆ ನಡೆದಾಗ ಏನೋ ಅತ್ಯಮೂಲ್ಯವಾದದ್ದನ್ನು ಕಳೆದುಕೊಂಡ ಅನುಭವ..!!ಎಲ್ಲವೂ ಮರೆಯಾಗಿ ಮರುಭೂಮಿಯಾಗಿತ್ತು ಮನಸ್ಸು..ಎಲ್ಲೆಲ್ಲೋ ಉದುರಿದ ಎಲೆಗಳು ಹುಡುಕಿದರೂ ಕಾಣದ ನೆರಳು ನನ್ನ ಕಾಡತೊಡಗಿತ್ತು..ಬರಿ ಮೌನ ಮೌನ ಮೌನ ಅಷ್ಟೇ! ನಾನು ಮನೆಗೆ ಬಂದು ಬಚ್ಚಿಟ್ಟು ಬಂದಿದ್ದ ದುಗುದವನ್ನೆಲ್ಲ ತೆಗೆದು ನೋಡತೊಡಗಿದೆ..ಆಗ ಅರಳಿ ನಿಂತಿದ್ದ ನನ್ನ ಸ್ವಾತಿಮುತ್ತು(ಪ್ರೀತಿ) ಬಾಡತೊಡಗಿತ್ತು..ಚಿನ್ನ ನಿನ್ನು ಮರೆಯಲಾಗದಲ್ಲ….ಏನು ಮಾಡಲಿ ನಾನು..ಹೇಳು..

ಇಂತಿ ನಿನ್ನ..
ಕ್ಷಮಿಸು….ಇನ್ನೆಂದೂ ನಿನ್ನವಳಲ್ಲದ…
ಮುದುಡಿರುವ ಜೀವ

Advertisements

7 Comments »

 1. 1
  nagtalwar Says:

  ತಂಗೀ, ನೀನು ಅಷ್ಟೊಂದು ಪ್ರೀತಿಮಾಡಿದ ಜೀವಿನ ಅದೆಂಗವ್ವ ಬ್ಯಾರ್‍ಯಾ ಯಾರಿಗೋ ಬಿಟ್ಟು ಕೊಟ್ಟಿ: ಅಣ್ಣಾ..! ನನಗೆ ಇವ ಬೇಕು, ನನ್ನ ಬದುಕಿನ ಪೂರ್ತಿ. ಅಂತ ಒಂದಾ ಮಾತ ಹೇಳಿದ್ರ ಸಾಕಿತ್ತಲ್ಲಬೇ..ಒಲ್ಲೆ ಅಂದವನ ಎದಿ ಬಗದು ಆ ಹೃದಯನರ ನಿನ್ನ ಕೈಗೆ ತಂದಿಡುತಿದ್ದೆ.ಖರೆನಾ ಬಾಳಾ ಬ್ಯಾಸರಾತವ್ವ ನಿನ್ನ ಪತ್ರ ಓದಿ, ಹುಲಿ ಅಂತ ಅಣ್ಣ ಇದ್ರೂ ಉಣ್ಣ ತಟ್ಟಿ ಮುಂದ ಅತ್ತುಗೊಂತಾ ಕುಂತಿದ್ದಿ ಅಂತ ತಿಳಿದಮ್ಯಾಕಂತೂ…ನನಗೆ ಜೀವನಾ ಎದಿಗೆ ಬಂದಾಗ ಅಗೇತಿ, ಎದಿನ ಕಲ್ಲುಮಾಡಿಕೆಂಡು ಹೆಂಗ ಬದುಕವ್ವ ಮತ್ತ ಒಳ್ಳೆ ದಿನಗಳು ಬಂದಾ ಬರ್‍ತಾವು…
  ಇಂತಿ.. ನಿಮ್ಮಣ್ಣ..ನಾಗಣ್ಣ

 2. 2

  Sorry nimma feeling kadime madalu nanninda sadhyavagadirabahudu. adare nimma feeling nijakku hrudaya kalakitu.

  Aadare devaranna nimage olledu madalu kelikolluve.

 3. ಸ್ವಾತಿ,
  ನಿಜಕ್ಕೂ ನಿಮ್ಮದು ವಿಶಾಲ ಮನಸ್ಸು, ಬರಹ ಇಷ್ಟವಾಯಿತು, ಅದರ ಒಡಲಾಳದ ನೋವು ಮನಸ್ಸು ತುಂಬಿತು.
  -ರಾಜೇಶ್ ಮಂಜುನಾಥ್

 4. 4
  svatimuttu Says:

  ಇದು ಬರಿ ಕಲ್ಪನೆಯ ಸಾಗರ ಅಷ್ಟೇ.. ನನ್ನ ಜೀವನದಲ್ಲಿ ನಡೆದ ಘಟನೆಯಲ್ಲ..ನಿಮ್ಮ ಮನಸ್ಸಿನ ಅಂತರಾಳಕ್ಕೆ ಈ ಪತ್ರ ಮುತ್ತಿಟ್ಟು ಬಂದಿದ್ದರೆ ತುಂಬಾ ಕುಶಿ..
  ಮತ್ತೆ ನಾಗಣ್ಣ ಅವರು ನನ್ನ ತಂಗಿಯಾಗಿ ಸ್ವೀಕರಿಸಿ ಆ ಧೈರ್ಯದ ಮಾತುಗಳು ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ ..
  ಸುಂದರನಾಡು ಅವರಿಗೂ ಸಹಾ ಧನ್ಯವಾದಗಳು..
  ರಾಜೇಶ್ ಇದು ನನ್ನ ಮನಸ್ಸಲ್ಲ …ಯಾವುದೂ ಕಲ್ಪನಾ ಲೋಕದಲ್ಲಿ ಹರಿದು ಬಂದ ಹುಡುಗಿಯ ಕಥೆ ಅಷ್ಟೇ..
  ನಿಮ್ಮೆಲ್ಲರ ಮನಸುಗಳ ಕಲಕಿದೆ ಅಂದಿದ್ದು ನನಗೆ ತುಂಬಾ ಕುಶಿ ನೀಡಿತು…ಎಲ್ಲರಿಗು ಧನ್ಯವಾದಗಳು

 5. 5
  sunil Says:

  “………………………….”
  Anikethana sunil.

 6. 6
  Lokiiiiiii Says:

  Keep it up ammi
  Superbbbb Writer Also


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: