ನಿನ್ನ ತಬ್ಬಿಕೋಬೇಕು ಕಣೊ !


0001-0401-2319-5145_couple_on_the_beach_at_sunset

ಮುದ್ದು-ಮುದ್ದಾಗಿ ಪೆದ್ದು ಪೆದ್ದಾಗಿ ನನ್ನ ಕಣ್ಣುಗಳನ್ನು ಕಿತ್ತು ತಿಂದು ಬಿಡುವ ಹಾಗೆ ನೋಡುತ್ತಾ ನನ್ನ ಮಡಿಲಲ್ಲಿ ಬಂದು ಮಲಗಿದ್ದನ್ನು ಯಾಕೋ ಮರೆಯೋಕಾಗ್ತಿಲ್ಲ ಸಂಜು. ಆ ಸೂರ್ಯ ನಮಗೆ ತೊಂದರೆ ಕೊಡಬಾರದು ಅಂತ ಚೂರು ಚೂರು ಮರದ ಎಲೆಗಳ ಸಂಧಿಯಿಂದ  ಕದ್ದು ನೋಡುತ್ತಿದ್ದ.. ನಾನಾಗ ಗದರಿದ್ದಕ್ಕೆ ಕೋಪಗೊಂಡು ಮಲಗೊಕ್ಕೆ ಹೊರಡುತ್ತಿದ್ದ, ಆಗ ನೀ ಅವನಿಗೆ ಕಂಡೂ ಕಾಣದಂತೆ ನನ್ನ ಕೆನ್ನೆಗೆ ಮುತ್ತಿಟ್ಟು ನನ್ನ ಗಲ್ಲ ಕೆಂಪು-ಕೆಂಪಾದಾಗ ನೀ ನನ್ನ ಬರಸೆಳೆದು ಇನ್ನೊದು ಮುತ್ತಿಟ್ಟು ನಿನ್ನೆದೆಯೊಳಗೆ ನನ್ನ ತುಂಬಿಸಿಕೊಂಡು ನಾ ಕರಗಿಹೊದಾಗ ಆ ಮರದಲ್ಲಿ ಕುಳಿತ್ತಿದ್ದ ಜೋಡಿ ಹಕ್ಕಿಗಳು ನಮ್ಮನ್ನೇ ದಿಟ್ಟಿಸುತ್ತಿದ್ದನ್ನು ನೀ ತಾಳಲಾರದೆ ಅದಕ್ಕೆ ಕಲ್ಲೆಸೆದು ನನ್ನ ಹೃದಯಕ್ಕೆ ಕನ್ನ ಹಾಕಿದ್ದನ್ನು ನೆನೆಸಿಕೊಳ್ಳುತ್ತಾ ಒಳಗೊಳಗೇ ನಗುತ್ತಿದ್ದೀನಿ ಸಂಜು.
ನಿನ್ನೊಡನ್ನಿದ್ದಷ್ಟು ಹೊತ್ತು ಅದೇನೋ ಲಜ್ಜೆ ಖುಷಿ ಒಲವು ಎಲ್ಲವೂ ದಡ ದಾಟಿ ನಿನ್ನೊಲವಿನ ಊರಿನೆಡೆಗೆ ಹರಿಯತೊಡಗಿತ್ತು. ನೀನು ನನ್ನ ನೀಲ ಕೇಶದ ತುದಿಯನ್ನಿಡಿದು ನಿನ್ನ ಮುದ್ದು-ಮುದ್ದಾದ ಕೈಬೆರಳುಗಳ ನಡುವೆ ಹೆಣೆದಿದ್ದ ಜಡೆಯನ್ನಿಡಿದು ಆಟವಾಡುತ್ತಿದ್ದಾಗ ನನಗೆನೇನೋ ಅನ್ನಿಸುತ್ತಿತ್ತು . ನಿನ್ನ ಕೈಬೆರಳುಗಳ ನಡುವೆ ನನ್ನ ಕೈ ಬೆರಳುಗಳ ಹೆಣೆದು ಕೊರಳಿಗೆ ಹಾರ ಹಾಕಿದಾಗ ಈಗಾಲೇ ನಿನ್ನೆಳೆದುಕೊಂಡು ಹೋಗಿ ಮದುವೆ ಆಗಿ ಬಿಡೋಣ ಎಂದನಿಸಿ, ನನ್ನ ಮಂಕುಬುದ್ದಿಗೆ ನಾನೇ ತುಂಟ ನಗೆ ಬೀರಿ  ತಲೆ ಚಚ್ಚಿಕೊಂಡು ನಿನಗೆ ಮುತ್ತಿಟ್ಟಾಗ ನಿನ್ನ ಕಚಗುಳಿಯಿಡುವ ಮೀಸೆ ನನ್ನ ಕೆಣಕಿದ್ದನ್ನು ನೆನೆಯುತ್ತಾ ನಾಚಿ ನೀರಾಗುತ್ತಿದ್ದೇನೆ ..ಸಂಜು ಬೇಗ ಬಂದು ನನ್ನ ಕುಡಿದುಬಿಡು, ಇಲ್ಲ ಅಂದ್ರೆ ಹರಿದು ಹೋಗಿಬಿಡುತ್ತೇನೆ .

ನಿನ್ನೆದೆಗೆ ನನ್ನ ತಲೆಯೊತ್ತಿ ಮಲಗಿದ್ದಾಗ  ನಿನ್ನ ತುಂಟ ಹೃದಯ ಇದೆಯಲ್ವಾ, ಅದು ನನ್ನ ಏನೇನೋ ಕೇಳಿ ಪಡೆದುಕೊಳ್ಳುತ್ತಿತ್ತು..ಇನ್ನೊಂದೆಡೆ ನಿನ್ನ ಬಿಸಿ ಉಸಿರು ನನ್ನ ಮುಂಗುರುಳಿಗೆ ತಾಗಿ ಅದು ನನ್ನ ಗಲ್ಲವ ಮುತ್ತಿಡುತ್ತಿತ್ತು. ನಿನ್ನ ಹಿತವಾದ ಸನಿಹ ಅದರೊಡನೆ ನನ್ನ ತಲೆ ನೇವರಿಸುವ ನಿನ್ನ ಕೈ ಇವೆಲ್ಲವ ನಡುವೆ ಮೌನ ಸಂಭಾಷಣೆಯು ನಡೆಯುತ್ತಿತ್ತು ಅದೆಂತಹ ಮಧುರ ಕ್ಷಣಗಳು ನಮ್ಮಿಬ್ಬರ ಮನ ತುಂಬಿತ್ತು. ನೀ ಹೊರಡೋಣ ಎಂದಾಗ ಏಳಲೂ ಆಗದೆ, ಏನೋ ಹೃದಯ ತುಂಬಿ ಬಂದು ನನ್ನ ಕಣ್ಣಾಲಿಗಳಲ್ಲಿ ಮುತ್ತಿನ ಬಿಂದುಗಳು ಹೋರಾಡಲಾಗದೆ ನನ್ನ ಗಲ್ಲದ ಹಾದಿ ಹಿಡಿದಾಗ ನೀ ಅವಕ್ಕೆ ಮುತ್ತಿಟ್ಟು ನಿನ್ನ ಕಣ್ಣುಗಳಲ್ಲೇ ಮುದ್ದು-ಮುದ್ದಾಗಿ ನನಗೆ ಧೈರ್ಯ-ಆಶ್ವಾಸನೆ ಕೊಟ್ಟು ನನ್ನ ಕೈಯೊಳಗೆ ನಿನ್ನ ಕೈಯನಿಟ್ಟು   ಅದಕೊಂದು ಸಿಹಿಯಾದ ಮುತ್ತನಿಟ್ಟು  ಕಳಿಸಿದ್ದನ್ನು ಇಗಲೂ ನೆನೆಸಿಕೊಂಡು ಯಾವುದೋ ಮೋಡದ ಮರೆಯಲಿ ನಿಂತು ನಗುತ್ತಿರುವೆ ಸಂಜು. ಹೇಳು, ಮತ್ಯಾವಾಗ ಬರ್ತಿಯಾ…ನಿನ್ನವಳ ನೋಡಲು? ಕದ್ದು-ಕದ್ದು ನನಗೆ ಮುತ್ತನಿಡಲು? ನಿನ್ನ ಬಾಹುಗಳಲಿ ನನ್ನ ತುಂಬಿಕೊಳ್ಳಲು?
………….ಕಾಯುತ್ತಿರುವೆ ಸಂಜು……………..

Advertisements

3 Comments »

 1. 1
  nagtalwar Says:

  ತಂಗೀ, ಯಾಕಮ್ಮ ಭಾವುಕಳಾಗಿ ನಿನ್ನ ಮನದೊಳಗಿನ ವೇದನೆಗೆ ನೀನೊಬ್ಬಳೇ ಕೊರಗುತ್ತೀ..ನೋಡು ಅದು ಕೇವಲ ಬರಹಕ್ಕಾಗಿದ್ದರೆ ಸರಿ; ನಿಜಕ್ಕೂ ನಿನ್ನೊಳಗೊಂದು ಪ್ರತ್ಯೇಕ ವೇದನೆಯೇನಾದರೂ ಇದ್ದರೆ ದಯವಿಟ್ಟು ಈ ಸಹೋದರನಲ್ಲಿ ಹೇಳಿಬಿಡು. ಯಾಕೋ ಈ ರೀತಿಯ ವಿರಹ ಪತ್ರಗಳು ನನ್ನ ತಂಗಿಯಿಂದ ನಾ ನಿರೀಕ್ಷಿಸಲು ಬಯಸುತ್ತಿಲ್ಲ. ಸಹೋದರಿ ಎಂಬ ಸಲುಗೆಯಿಂದ ಈ ಮಾತನ್ನು ಹೇಳಿದ್ದೇನೆ, ನಿನ್ನ ಮನಸ್ಸಿಗೇನಾದರೂ ಬೇಜಾರಾಗಿದ್ದರೆ; ಕ್ಷಮಿಸಿಬಿಡಮ್ಮಾ…!
  -ನಾಗು,ತಳವಾರ್.

 2. 2
  svatimuttu Says:

  ಪ್ರೀತಿಯ ನಾಗಣ್ಣ ,
  ನಿಮಗೆ ಈ ತಂಗಿಯ ಮೇಲಿರುವ ಪ್ರೀತಿ ಮೆಚ್ಚಬೇಕಾದದ್ದೇ..ಅಣ್ಣ ಇದು ಬರಿ ಕಲ್ಪನೆಯ ಸಾಗರ ಅಷ್ಟೇ.. ಬರಹ ಅಷ್ಟೇ ..ಎಂದು ಹೇಳಲು ಇಚ್ಚಿಸುತ್ತೇನೆ..ನನ್ನ ಬಗ್ಗೆ ಅಷ್ಟೊಂದು ಕಾಳಜಿ ವಹಿಸಿದ್ದಕ್ಕೆ ತುಂಬಾ ಧನ್ಯವಾದಗಳು…

 3. 3
  sunil Says:

  Inchara,
  This is simply superb…..very innocent and clear expression of love.
  Ninna bhaasheyamelina hidita abhinandanaarha….nijakkoo sunda ri. odutta outta naave allina paatragalaagibittante annisutte….really cool.
  keep it up.
  Anikehana Sunil.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: