ರೀ.. ಏನೂಂದ್ರೆ ಸ್ವಲ್ಪ ನೋಡ್ತೀರಾ ಇಲ್ಲಿ !


ಪ್ರೀತಿಯ ಪತಿ ದೇವರಿಗೆ,

ನಿಮ್ಮ ಅರ್ಧಾಂಗಿಯ ಹೃದಯ ಪೂರ್ವಕ ನಮನಗಳು. ಇವತ್ತು ಯಾವ ದಿನ ಗೊತ್ತೇ? ನಮ್ಮ ಮದುವೆಯಾಗಿ, ನಾನು ನಿಮ್ಮ ಅರ್ಧಾಂಗಿಯಾಗಿ ಇವತ್ತಿಗೆ ಒಂದು ತಿಂಗಳು ತುಂಬಿದೆ. ನಿಮಗೆ ನೆನಪಿದೆಯಾ ಆ ದಿನ ನಾನು ಮದುಮಗಳಾಗಿ ಕಲ್ಯಾಣ ಮಂಟಪಕ್ಕೆ ನೂರಾರು ಕನಸುಗಳ ಹೊತ್ತು ವರನಾದ ನಿಮ್ಮೆಡೆಗೆ ಮತ್ತು ನಿಮ್ಮ ಪ್ರೀತಿಯ ಸಾಗರಕ್ಕೆ ನಾನು ಹೆಜ್ಜೆ ಇಡುತ್ತಿದ್ದೆ. ನಿಮ್ಮ ಕಣ್ಣುಗಳಲ್ಲಿ ಸಂತೋಷದಿಂದ ಉರಿಯುತ್ತಿರುವ ಜ್ಯೋತಿ ನನ್ನ ಬಾಳ ಬೆಳಗಲು ಹೊತ್ತಿಸಿದೆಯೋ ಎಂಬಂತೆ ನಿಮ್ಮ ಬಾಳ ಸಾಗಾರಕೆ ನೀವು ನನಗೆ ಭರ್ಜರಿಯಾದ ಆಹ್ವಾನ ನೀಡುತ್ತಿದ್ದೀರಿ ಎಂದು ಹೇಳತೊಡಗಿತ್ತು ಆ ನಿಮ್ಮ ಆಸೆ ಹೊತ್ತ ಕಣ್ಣುಗಳು!

ಆ ಕ್ಷಣ ನಿಮ್ಮ ಬಲಭಾಗಕ್ಕೆ ಕುಳಿತು ಮಂತ್ರೋಪದೇಶಗಳ ಪಠಿಸಿ, ಅಗ್ನಿ ಸಾಕ್ಷಿಯಾಗಿ ಕಾಯ-ವಾಚ-ಮನಸಾ ಒಪ್ಪಿ ನಿಮ್ಮವಳಾದೆ. ನೀವು ನನ್ನ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಕ್ಷಣವಂತೂ ಒಂದೆಡೆ ಮುಂದಿನ ಸುಂದರ ಬಾಳಿನ ಚಿತ್ತಾರ ಕಣ್ಣ ಮುಂದೆ ಹರಿಯತೊಡಗಿದ್ದರೆ ಇನ್ನೊಂದೆಡೆ ತಂದೆ-ತಾಯಿಯ ಅಗಲಿ ಹೋಗಬೇಕೆಂಬ ನೋವು ಕಾರ್ಮೊಡದಂತೆ ನನ್ನ ತಬ್ಬಿ ಕುಳಿತಿತ್ತು. ಕಂಬನಿಯು ಚಿಮ್ಮಲು ಹೊರಬರುತ್ತಿದ್ದರೂ ನನ್ನ ಮನಸ್ಸು ಅದನ್ನು ತಡೆದು ನಿಲ್ಲಿಸಿ ಬದಲಾಗಿ ಮುಖದಲ್ಲೊಂದು ಸಣ್ಣನೆ ಮುಗುಳ್ನಗೆಯಾಗಿ ಹೊರಬಿದ್ದಿತ್ತು. ನಂತರ ಆಕಾಶದಲ್ಲಿ ಅರುಂಧತಿ ನಕ್ಷತ್ರ ತೋರಿಸಲು ಪುರೋಹಿತರ ಹಿಂದೆ ಹೋದಾಗ ನೀವು ನನ್ನ ಬಳಸಿ ನನ್ನ ಕೈಯನ್ನು ನಿಮ್ಮ ಕೈಯೊಳಗೆ ಹಿಡಿದು ಭದ್ರವಾದ ಕೋಟೆಯೊಳಗೆ ನನ್ನ ಬಂಧಿಸಿದಾಗ ಪುಳಕಗೊಂಡು ಆ ಕ್ಷಣ ನಲಿವಿನ ತೋಟವಾಯಿತು. ಎಲ್ಲರ ಆಶಿರ್ವಾದಗಳಿಗೆ ಮೊರೆ ಹೊಕ್ಕು ಹೂವ ಹಾಸಿಗೆಯ ಬೆನ್ನ ಹತ್ತಿ ಮನ ಸೋತು ಕಿಟಕಿಯಂಚಿನಲ್ಲಿ ಕದ್ದು-ಕದ್ದು ನೋಡುತ್ತಿದ್ದ ಚಂದ್ರನ ಕಣ್ಮುಚ್ಚಿ ನಿಮ್ಮ ಬಿಸಿಯಪ್ಪುಗೆಯಲ್ಲಿ ಕರಗಿ ನೀರಾಗಿ ಸಂತೋಷವನುಂಡು ನಿಮ್ಮವಳಾದ ಭಾಗ್ಯವ ನೆನೆಸಿಕೊಂಡು ಈ ಪತ್ರವ ಬರೆಯುತ್ತಿದ್ದೇನೆ.

ಇಷ್ಟು ದಿನ ತವರಿನ ಆಸೆ ಹೊತ್ತು ಇಲ್ಲಿಗೆ ಬಂದರೆ ಬರೀ ನಿಮ್ಮ ನೆನಪುಗಳೇ ಹೃದಯ ತುಂಬುವಷ್ಟು ನನ್ನನ್ನಾವರಿಸಿ ವಿರಹ ವೇದನೆಯ ರಾಗವ ನುಡಿಸುತಿದೆ. ನೀವು ಆದಷ್ಟು ಬೇಗ ಬಂದು ನಿಮ್ಮವಳನ್ನು ನಿಮ್ಮ ಮನೆಯಂಗಳಕೆ, ಹೃದಯದಂಗಳಕೆ ಕರೆದುಕೊಂಡು ಹೋಗಿ.

ನಿಮ್ಮ ನೀರೀಕ್ಷೆಯಲ್ಲಿ ನಿಮಗಾಗಿ ಕಾಯುತ್ತಿರುವೆ…

ಇಂತಿ,
ನಿಮ್ಮ ಒಲವಿನ ಅರ್ಧಾಂಗಿ…

ಕನಸು

Advertisements

8 Comments »

 1. 1
  nagtalwar Says:

  ತಂಗೀ, ಎತ್ತಿನ ಗಾಡಿ ಕಟ್ಟಿಗೊಂಡು ನಾ ಸಿದ್ಧನಾಗಿ ನಿಂತೀನಿ. ತವರ್‍ಮನ್ಯಾಗ ಕಣ್ಣೀರಾಕಬಾರ್‍ದವ್ವಾ…!ಅಳೀಯಂದ್ರಿಗೆ ನಿನ್ನನ್ನ ಕರಕ್ಕೊಂಡು ಹೋಗ್ಲಿಕ್ಕೆ ವ್ಯಾಳ್ಯ ಕೂಡಿಬಂದಿಲ್ಲ ಅನ್ಸುತ್ತೆ. ನಡಿ ನನ್ನ ಜೋಡಿ, ನಿನ್ನ ಗಂಡನ ಮನಿಗೆ ನಿನ್ನ ಬಿಟ್ಟು; ನಿನ್ನ ಕೈಯಾರ ಮಾಡಿದ ಹೋಳ್ಗಿ ಉಂಡು ಬರವದಿನಿ ನಾ.( ಖರೆನ ಪತ್ರ ಪಸಂದೈತವ್ವ…ಅಗ್ಧಿ ಛೊಲೊ ಐತಿ, ಬೇಶ್ ಬರಿತೀಯವ್ವ. ನಿನಗೆ ಒಳ್ಳೆದಾಗ್ಲಿ)
  -ನಾಗು,ತಳವಾರ್,

 2. 2
  svatimuttu Says:

  ಪ್ರೀತಿಯ ನಾಗಣ್ಣ ,
  ತುಂಬಾ ಧನ್ಯವಾದಗಳು…

 3. ಇಂಚರ,
  ತಾಯಿ ನಿನ್ನೆಜಮಾನ ಪುಣ್ಯ ಮಾಡಿದ್ದ ಬಿಡವ್ವ…
  ದೇವರು ಒಳ್ಳೆಯದು ಮಾಡಲಿ, ಕನಸಿನ ರಾಜಕುಮಾರ ಹೊತ್ತೊಯ್ಯಲಿ ಎಂದು ಆಶಿಸುವೆ…

 4. 4
  svatimuttu Says:

  rajesh,

  ಧನ್ಯವಾದಗಳು…:)

 5. ಆದಷ್ಟು ಬೇಗ ಬಂದು ಕರೆದು ಕೊಂಡು ಹೋಗಲಿ ಎಂದು ಆಶಿಸುವ ಪುಟಾಣಿ ಅಕ್ಕ

 6. 6
  svatimuttu Says:

  ಧನ್ಯವಾದಗಳು ಅಕ್ಕ..

 7. 7
  minchulli Says:

  ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

  ಶುಭವಾಗಲಿ,
  – ಶಮ, ನಂದಿಬೆಟ್ಟ

 8. 8
  Laxman Says:

  Dear Inchar
  swathi muttugalu tumba chennagideri. nanu nimma barahagalanna odi nija anth tilididde. kalpaneya barahagalu kalpanika annisadastu naijavagive.

  Keep writing
  Laxman


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: