ಪ್ರತಿಬಿಂಬ


ಮುದುಡಿ ನಗುತಿರುವ

ಮೊಗ್ಗಿನೊಳಗಿನ ಕುಸುಮದಂತೆ

ನನ್ನ ನಗುವೊಳು

ನಿನ್ನುಸಿರ ಬೆರೆಸಿರುವೆ..

ಗುಹೆಯೊಳಡಗಿರುವ ನೂರಾರು ಸತ್ಯಗಳ

ನಿಗೂಢ ಮೌನದಂತೆ

ಎನ್ನ ಮೌನದೊಡನೆ ಬೆರೆತು

ಸಂಭಾಷಣೆ ನಡೆಸುತಿರುವೆ..

ಸಮಸ್ತ ಲೋಕಕೂ

ಒಂದೇ ಆಕಾಶ ಚಪ್ಪರವಿರುವಂತೆ

ನಮ್ಮ ಮಾತು-ಭಾವ ತರಂಗಗಳು

ಒಂದಾಗಿ ಬೆರೆತು ಹಾಡುತಿವೆ..

ಒಡಲ ತುಂಬಿಕೊಂಡಿರುವ ತಾಯಿಯ

ಕಂಗಳಲಿ ಪ್ರಜ್ವಲಿಸುವ ಜ್ಯೋತಿಯಂತೆ

ನಿನ್ನ ನೆನಪುಗಳು ನನ್ನೊಳಗೆ ತುಂಬಿ

ನನ್ನ ಬಾಳ ಬೆಳಗುತಿದೆ ..

18 Comments »

 1. ಇಂಚರ,
  ಇಂತದ್ದೆ ಒಂದು ಜ್ಯೋತಿ ನಿಮ್ಮ ಬಾಳಿನ ಅಂಗಳದಲ್ಲಿ ಬೆಳಗಿ ಪ್ರಜ್ವಲಿಸಿ ಬಿಡಲಿ…
  ಆಶಾವಾದದ ಪ್ರೀತಿ ತುಂಬಿದ ಸಾಲುಗಳು ಚೆನ್ನಾಗಿ ಮೂಡಿದೆ.

 2. 2

  ಇಂಚರ,

  ಒಡಲ ತುಂಬಿಕೊಂಡಿರುವ ತಾಯಿಯ

  ಕಂಗಳಲಿ ಪ್ರಜ್ವಲಿಸುವ ಜ್ಯೋತಿಯಂತೆ

  ನಿನ್ನ ನೆನಪುಗಳು ನನ್ನೊಳಗೆ ತುಂಬಿ

  ನನ್ನ ಬಾಳ ಬೆಳಗುತಿದೆ ..

  ಈ ಸಾಲುಗಳು ತುಂಬಾ ಚನ್ನಾಗಿವೆ…..ಹೀಗೆ ಬರೆಯುತ್ತಿರಿ……

 3. 3
  shivu.k Says:

  ಇಂಚರ,

  ಸಮಸ್ತ ಲೋಕಕೂ

  ಒಂದೇ ಆಕಾಶ ಚಪ್ಪರವಿರುವಂತೆ

  ನಮ್ಮ ಮಾತು-ಭಾವ ತರಂಗಗಳು

  ಒಂದಾಗಿ ಬೆರೆತು ಹಾಡುತಿವೆ..

  ಸಾಲುಗಳು ಇಷ್ಟವಾದವು…

  ಕವನ ಚೆನ್ನಾಗಿದೆ….

 4. 4
  minchulli Says:

  ನಲ್ಮೆ ತುಂಬಿದ ನವಿರು ಕವನ.. ಇಷ್ಟವಾಯ್ತು…

 5. 5
  Roopa Says:

  hi,
  kavana tumbaa chennagide…
  keep writing… 🙂

 6. ನವಿರು ಭಾವ ತುಂಬಿ ತುಳುಕುತ್ತಿದೆ ಇಂಚರ. ಹೀಗೇ ಬರೆಯುತ್ತಿರಿ.

 7. 7
  anil manju Says:

  ಕವನ ಚೆನ್ನಾಗಿದೆ….

 8. 10
  svatimuttu Says:

  ರಾಜೇಶ್,
  ಮನ ತುಂಬಿ ಹರಸಿರುವುದಕ್ಕೆ ಧನ್ಯವಾದಗಳು….. ಹೀಗೆ ಬಂದುಓದುತ್ತಿರಿ.
  gnana murthi, shivu avare,
  ನಿಮಗೆ ಆ ಸಾಲುಗಳು ಇಷ್ಟವಾಯಿತೆಂದು ತಿಳಿದು ತುಂಬಾ ಖುಷಿ ಆಯಿತು… ಧನ್ಯವಾದಗಳು

  ಶಮಾ ಅಕ್ಕ,ರಂಜಿತ್ ಅಣ್ಣ, ಗುರು ಅಣ್ಣ, ಮಂಜು (ಪುಟ್ಟ),
  ನಿಮ್ಮೆಲ್ಲರಿಗೂ ಇಷ್ಟವಾಗಿ ನನ್ನ ಹರಸಿದ್ದಕ್ಕೆ ಧನ್ಯವಾದಗಳು…
  ಅನಿಲ್ ಅವರೇ,
  ನನ್ನ ಬ್ಲಾಗಿಗೆ ಮೊದಲನೆಯ ಬಾರಿ ಬಂದು ಓದಿ ಪ್ರೋತ್ಸಾಹ ನೀಡಿದ್ದು ತುಂಬಾ ಖುಷಿ ಆಯಿತು…

 9. 11
  acchu Says:

  tumbaane ista aaytu akka… keep it going….

 10. 12
  Roopa Says:

  Hey Sh,

  Kavana chennaagide, esp.., these lines…

  ಗುಹೆಯೊಳಡಗಿರುವ ನೂರಾರು ಸತ್ಯಗಳ
  ನಿಗೂಢ ಮೌನದಂತೆ
  ಎನ್ನ ಮೌನದೊಡನೆ ಬೆರೆತು
  ಸಂಭಾಷಣೆ ನಡೆಸುತಿರುವೆ

  why dont u post in 3K – Kannada Kavithe Kavana community?

  Heege baritiru…

 11. 13
  HARISH Says:

  tutiyanchina maatu saddu maadade manadolage ilidu bhaavanegala chumbisitu.. naanu e taanakke modala saari banda aparichita…. banda mele hindirugi hogalu manasaagale illa….
  kasturi kannadada savi kampu …..

 12. 14
  ranjana Says:

  ಗೆಳತಿ ಇಂಚರ,

  ತಮ್ಮ ನವಿರಾದ ಕವನ ಮನಸ್ಸಿಗೆ ನವಿರಾಗಿ ತಾಗಿತು.

  ರಂಜನಾ

 13. 15
  svatimuttu Says:

  ಅಚ್ಚ್ಹು,
  ಧನ್ಯವಾದಗಳು….

 14. 16
  svatimuttu Says:

  ರೂಪ ಅಕ್ಕ,
  ತುಂಬಾ ಧನ್ಯವಾದಗಳು.. ಅಯಿತು ಅಕ್ಕ post ಮಾಡುತ್ತೇನೆ….

 15. 17
  svatimuttu Says:

  ಹರೀಶ್ ಅವರೇ,
  ನನ್ನ ಬ್ಲಾಗಿಗೆ ಮೊದಲ ಬಾರಿಗೆ ಬಂದು ,ನನ್ನ ಬರಹಗಳನ್ನು ಓದಿ ನಿಮ್ಮ ಅನಿಸಿಕೆ ಬರೆದು ಹೋಗಿದ್ದಕ್ಕೆ ಧನ್ಯವಾದಗಳು

 16. 18
  svatimuttu Says:

  ಗೆಳತಿ ರಂಜನ,
  ಧನ್ಯವಾದಗಳು


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: