ರೀ ಏನುಂದ್ರೆ ಬೇಗ ಬರ್ತೀರಾ??


writing-a-letter

ನನ್ನ ಜೀವಕೆ ಉಸಿರಾದ ಪ್ರೀತಿಯ ಪತಿದೇವರಿಗೆ,

ನಂಗೊತ್ತು, ನನ್ನ  ಮನಕೆರಳಿಸುವ ನಿಮ್ಮ ಮೀಸೆಯಡಿಯಲ್ಲಿ ಅರಳುತಿರುವ ಮುದ್ದಾದ ನಗು ಹೊತ್ತು ಈ ಪತ್ರವನ್ನು ಓದುತ್ತಿದ್ದೀರಿ ಅಲ್ವಾ? ರೀ ಈ ಪತ್ರ ಓದುವಾಗ ಹಾಗೂ ಓದಿದ ಮೇಲೂ ಹೀಗೆ ನಗುತ್ತಿರಿ ಎಂದು ನಾನು ಬಯಸುತ್ತೇನೆ.ಏಕೆಂದರೆ ಈ ಮುದ್ದಾದ ನಗುವಿಗೆ ತಾನೆ ೨ ವರಷಗಳ ಹಿಂದೆ ನಾ ಸೋತು ಹೋಗಿದ್ದು.. ನಾನು ಅಲ್ಲಿ ಇಲ್ಲದೆಯೇ ನೀವು ಚೆನ್ನಾಗಿಲ್ಲ ಎಂದು ನನಗೆ ಗೊತ್ತು..ನನ್ನ ಮೇಲೆ ಪ್ರೀತಿ ಇದ್ದರೆ  ನಿಮ್ಮ ಆರೋಗ್ಯದ ಕಡೆಗೂ ಗಮನ ಕೊಡಿ.. ದಿನ್ನಕ್ಕೆರಡು ಬಾರಿ ನಿಮ್ಮ ಜೊತೆ ಫೋನಿನಲ್ಲಿ ಮಾತನಾಡಿದರೂ ಪತ್ರದಲ್ಲಿ ತೋರುವ ಆತ್ಮೀಯತೆ ಅದರಲ್ಲಿರುವುದಿಲ್ಲವಲ್ಲವೇ? ಒಂದು ದಿನವೂ ನನ್ನ ಕೈಯ್ಯಾರೆ ತುತ್ತು ತಿನ್ನದೆ ಊಟ ಮಾಡದ ನೀವು ಈವಾಗ ಹೇಗಿದಿರೋ ಊಟ-ತಿಂಡಿ ಸರಿಯಾಗಿ ಸೇವಿಸುತ್ತಿದ್ದೀರೋ ಇಲ್ಲವೋ ಎಂದು ನಿಮ್ಮ ಬಗ್ಗೆಯೇ ನೂರಾರು ಯೋಚನೆಗಳು ನನ್ನ ಕಾಡುತಿದೆ ಚಿನ್ನ.. ಈ ಹದಿನೈದು ದಿನಗಳಲ್ಲಿ ನಿಮ್ಮನ್ನು ತುಂಬಾನೆ ಮಿಸ್ ಮಾಡಿಕೊಂಡೆ ಚಿನ್ನ…ನನ್ನಷ್ಟೇ ನೀವು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ನನಗನ್ನಿಸುತ್ತಿದೆ…ನಾನು ಗರ್ಭಿಣಿ ಎಂದು ಇನ್ನೆಷ್ಟು ದಿನ ನನ್ನ ತಾಯಿಯಮನೆಯಲ್ಲಿ ನನ್ನನ್ನು ಬಿಟ್ಟು ಒಂಟಿಯಾಗಿರುವಿರಿ??

ಆದಷ್ಟು ಬೇಗ ಈ ಭಾನುವಾರ ಬರಲಿ.. ಆ ಒಂದು ವಾರದ ರಜೆಯಲ್ಲಿ ಸಂಪೂರ್ಣವಾಗಿ ನಾ ನಿಮ್ಮೊಡನೆ ಸಮಯ ಕಳೆಯಲು ಇಚ್ಚಿಸುತ್ತೇನೆ. ನಿಮ್ಮ ತೋಳೊಳಗೆ ನನ್ನನ್ನು ಬಳಸಿ ನೆಮ್ಮದಿಯಿಂದ ನಿಮ್ಮ ಎದೆಗೊರಗಿ ಮೌನ ಸಂಭಾಷಣೆಯಲ್ಲಿ ತೊಡಗಬೇಕು, ನಿಮ್ಮ ಮಡಿಲಲ್ಲಿ ನೆಮ್ಮದಿಯಿಂದ ಮಲಗಬೇಕೆಂದೆಲ್ಲಾ ಮನಃ  ಹಾತೊರೆಯುತ್ತಿದೆ… ಏನುಂದ್ರೆ ಬರುವಾಗ ತಪ್ಪದೇ ನನಗಿಷ್ಟವಾದ ಸಿಹಿ ತಿನಿಸು ಮತ್ತೆ ಮಲ್ಲಿಗೆಯ ತೋಮಾಲೆ ತರುವುದನ್ನು ಮರೆಯಬೇಡಿ..

ಇನ್ನೊಂದು ವಾರದೊಳಗೆ ನಮ್ಮಿಬ್ಬರ ಪ್ರೇಮದ ಕುಡಿ ಈ ಜಗತ್ತಿಗೆ ತನ್ನ ಮುಗ್ಧ ಮೋರೆ ಹೊತ್ತು ಬರಲಿದೆ.. ಆ ಕ್ಷಣವ ನೆನೆದರೆ  ಭಯ-ಆತಂಕಗಳು, ಖುಷಿ-ಸಂತಸ ಎಲ್ಲವೂ ಆಗುತ್ತಿದೆ… ಆ ಮಗುವಿನ ಮೊದಲ ಕೂಗನ್ನು ಕೇಳಲು ನನ್ನ ಕಿವಿಗಳು ಕಾಯುತಿವೆ.. ಅದರ ಮೊದಲ  ಸ್ಪರ್ಶವ ಅನುಭವಿಸಲು ತುಂಬಾ ಕಾತುರದಿಂದ ಕಾಯುತಿರುವೆ… ಆದರೂ ಏನೋ ಭಯ ನನ್ನ ಕಾಡುತಿದೆ.. ನೀವು ನನ್ನೊಡನಿದ್ದರೆ ಈ ಪ್ರಪಂಚವನ್ನೇ ನಾ ಗೆಲ್ಲಬಲ್ಲೆ ಎಂಬ ನಂಬಿಕೆ ಇದೆ.. ಏನುಂದ್ರೆ ಬೇಗ ಬಂದುಬಿಡಿ.

ಆದಷ್ಟು ನಿಮ್ಮ ಸನಿಹದಲ್ಲೇ ಇದ್ದು ನಿಮ್ಮ ಪ್ರೇಮ ಸಾಗರದಲ್ಲಿ ಮುಳುಗಿ ನನ್ನಲ್ಲಿರುವ ಭಯ-ಆತಂಕಗಳನ್ನು ನೀವು ಹೊರದೂಡಿಸಿ.  ನಮ್ಮ ಭವಿಷ್ಯವ ಬೆಳಗುವ ಮುತ್ತಿನಂತಹ ಮುದ್ದಾದ ಮಗುವಿಗೆ ಜನ್ಮ ನೀಡುತ್ತೇನೆ. ಈ ನನ್ನ ಆಸೆಗಳನ್ನು ಈಡೇರಿಸಲು ಬೇಗ ಬರುವಿರೆಂದು ನಂಬಿದ್ದೇನೆ. ಆದಷ್ಟು ಬೇಗನೆ ಬಂದು ನನ್ನನ್ನು ಸೇರಿ.. ನಮ್ಮ ಕುಟುಂಬಕ್ಕೆ ಆಗಮಿಸಲಿರುವ ಸ್ವಾತಿಮುತ್ತಿನ ಬಗ್ಗೆ ನೂರಾರು ಕನಸುಗಳ ಹೆಣೆಯೋಣ….. ನಿಮ್ಮದೇ ನಿರೀಕ್ಷೆಯಲ್ಲಿ…….

ನಿಮ್ಮ ಬಾಳಸಂಗಾತಿ

16 Comments »

 1. 1
  acchu Says:

  waaw…. so sweet akka… tumbaane chennaagide…. padagala balake tumba ista aaytu akka…. keep it up….

 2. 2
  shivu.k Says:

  ಮೇಡಮ್,

  ತುಂಬಾ ಚೆನ್ನಾಗಿದೆ ಬರಹ. ಓದುತ್ತಾ ಮನಸ್ಸು ಉಲ್ಲಾಸಗೊಳ್ಳುವಂತಿದೆ. ಪ್ರೀತಿಯ ಮಧುರ ಭಾವನೆಗಳನ್ನು ಪದಗಳಲ್ಲಿ ಚೆನ್ನಾಗಿ ಪೋಣಿಸಿದ್ದೀರಿ…

 3. 3
  Sunil Says:

  Tumba chennagi bardiddeeri Inchanra.
  Keep it up. 🙂
  Sunil.

 4. 4
  Umesh Says:

  ನಿಮ್ಮ ಬರವಣಿಗೆ ಶೈಲಿ ತುಂಬಾ ಹಿಡಿಸಿತು.. ಪದಗಳ ಮೇಲಿನ ಹಿಡಿತ, ಬರಹದಲ್ಲಿನ ಆತ್ಮೀಯತೆ, ಇಷ್ಟವಾಯಿತು. ಏನುಂದ್ರೆ, ತುಂಬಾ ಚೆನ್ನಾಗಿ ಬರೀತೀರಾ.. 🙂

 5. 5
  svatimuttu Says:

  ಪ್ರೀತಿಯ ಅಚ್ಚು,
  ಹೇಳಿದ ತಕ್ಷಣ ಓಡಿ ಬಂದು ಓದಿದಕ್ಕೆ ತುಂಬಾನೇ ಖುಷಿ ಆಯಿತು…..
  ಧನ್ಯವಾದಗಳು

 6. 6
  svatimuttu Says:

  ಶಿವು ಅವರೇ,
  ನನ್ನ ಬರಹ ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸಿತಲ್ಲವಾ…ಅದ ಕೇಳಿ ತುಂಬಾ ಖುಷಿ ಆಯಿತು..
  ಧನ್ಯವಾದಗಳು

 7. 7
  svatimuttu Says:

  ಸುನಿಲ್,
  ಧನ್ಯವಾದಗಳು, ಆಯಿತು ಎತ್ತಿ ಮೇಲೆ ಇಡುತ್ತೇನೆ…:)

 8. 8
  svatimuttu Says:

  ಉಮೇಶ್ ಅವರೇ,
  nice comment..:)[ಏನುಂದ್ರೆ, ತುಂಬಾ ಚೆನ್ನಾಗಿ ಬರೀತೀರಾ.. :)]….
  ಧನ್ಯವಾದಗಳು

 9. 9
  roopa satish Says:

  Hi SHhhh,
  patra chennaagi moodibandide….
  idu bareya ooohe allade, nijavaagiyu nijavaagiddare, oduva patidevaru karagi neeraaguvudantu guarantee!!
  All the best!!

 10. ಮೇಡಂ..,
  ಪತಿಯ ನಗುವನ್ನು ವರ್ಣಿಸಿರುವ ರೀತಿ ತುಂಬಾ ಮುದ್ದಾಗಿದೆ..

  ಇವ್ರೇ,.. ನಾನು ಬ್ಲಾಗ್ ಪ್ರಪಂಚಕ್ಕೆ ಹೊಸಬ,ದಯವಿಟ್ಟು ನನ್ನ ಬ್ಲಾಗನ್ನು ಒಮ್ಮೆನೋಡಿ…
  ನನ್ನ ಬ್ಲಾಗ್:balipashu.blogspot.com

 11. 11
  dhananjay Says:

  wah!!!! tumba adbhuthavagide Inchararavare…. bhya – aatankadallu a premada tuditana tumba chennagi bimbissiddara….. all the best

 12. 12
  svatimuttu Says:

  ಪ್ರೀತಿಯ ಅಕ್ಕ ರೂಪ,
  ನಿಮ್ಮ ಕಾಮೆಂಟ್ ಓದಿ ನಾಚಿಕೆ ಆಯಿತು..:)..
  ಧನ್ಯವಾದಗಳು ಅಕ್ಕ..:)

 13. 13
  svatimuttu Says:

  balipashu(ನೇರ ನುಡಿಯವನು)..????!!

  ನನ್ನ ಬ್ಲಾಗಿಗೆ ಲಗ್ಗೆ ಹಾಕಿ ಓದಿ ಪ್ರೋತ್ಸಾಹಿದುದಕ್ಕೆ ತುಂಬಾ ಧನ್ಯವಾದಗಳು….. ಸಾಧ್ಯವಾದಷ್ಟು ಬೇಗನೆ ಬಂದು ನಿಮ್ಮ ಬ್ಲಾಗನ್ನು ಓದುತ್ತೇನೆ….

 14. 14
  svatimuttu Says:

  ಧನಂಜಯರವರೇ,
  ನಿಮ್ಮ ಅನಿಸಿಕೆಗೆ ನಾ ಚಿರಋಣಿ…
  ಧನ್ಯವಾದಗಳು

 15. 15
  Somu Says:

  Really a wonderful letter. Assumed that you are married, but I came to know still that lucky guy is not into your life. Feeling happy for that person.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: