ಗೆಳತಿ..ನಿನ್ನ ಒಂದು ಪತ್ರದ ನಿರೀಕ್ಷೆಯಲ್ಲಿ ….


miss_u

ನಲ್ಮೆಯ ಗೆಳತಿಗೆ,

ನನಗೆ ಗೊತ್ತು ನೀ ತುಂಬಾ ಚೆನ್ನಾಗಿದ್ದೀಯ ಅಂತ..ಮದುವೆಯಾದ ನಂತರ ನಿನ್ನಿಂದ ಒಂದೂ ಪತ್ರ ಬಾರದೇ ಇದ್ದುದಕ್ಕಾಗಿ ನನ್ನ ಮನಸ್ಸಿಗೆ ತುಂಬಾ ನೋವುಂಟಾಗಿದೆ.. ವಾರಕ್ಕೆ ಎರೆಡು ಬಾರಿ ನಿನ್ನ ಪತ್ರ ನನ್ನ ಮನೆ ಬಾಗಿಲಿಗೆ ಬರುತ್ತಿದ್ದುದು, ಹದಿನೈದು ದಿನಗಳಾದರು ನನ್ನ ಕಣ್ಣಿಗೆ ಬೀಳದೆ ಚಂದಿರನಿಲ್ಲದ ಆಕಾಶದಂತಾಗಿದೆ ನನ್ನ ಬದುಕು…

ಗೆಳತಿ ನೀನಿಲ್ಲದೆ ಬದುಕು ಖಾಲಿ-ಖಾಲಿ ಅನಿಸುತಿದೆ..ನಿನ್ನ ಪ್ರೀತಿ ಮಾತುಗಳನ್ನು.. ನಿನ್ನ ಮುದ್ದಾದ ಅಕ್ಷರಗಳಲ್ಲಿ ನೋಡುತ ,ಓದುತ ಇರುತ್ತಿದ್ದೆ.. ನೀ ನನ್ನೊಡನಿಲ್ಲ ಅನ್ನೋ ಭಾವನೆಗಳ ಹೋಗಲಾಡಿಸುತ್ತಿದ್ದ ನಿನ್ನ ಒಲವಿನ-ಸಾಂತ್ವಾನದ ಮಾತುಗಳು, ನಿನ್ನ ಕವಿತೆಗಳು,ನೀನು ಸೊಗಸಾಗಿ ಬಿಡಿಸುತ್ತಿದ್ದ ಚಿತ್ರಗಳನ್ನು ನಾನೆಷ್ಟು ಮಿಸ್ಸ್ ಮಾಡಿಕೊಳ್ಳುತ್ತಿದ್ದೇನೆ ಗೊತ್ತಾ?? ಒಂದು ವಾರದಿಂದ ನೀ  ಬರೆದಿರುವ ಹಳೆಯ ಪತ್ರಗಳನು ನನ್ನ ಹಾಸಿಗೆಯೆಲ್ಲಾ ಹರಡಿ ಓದುತ್ತಿದ್ದೇನೆ..

ಪತ್ರದಲ್ಲಿ ಸಿಗುವ ಆತ್ಮೀಯತೆ ನೀ ನನ್ನ ಪಕ್ಕದಲ್ಲಿದ್ದರೂ ಸಿಗುವುದಿಲ್ಲ ಕಣೇ ..ಅದರ ಟೇಸ್ಟೇ ಬೇರೆ..ಅಷ್ಟು ಮುದ್ದಾಗಿ ಹೃದಯಕ್ಕೆ ಹತ್ತಿರವಾಗಿ ಮನಸ್ಸಿಗೆ ನಾಟುತ್ತವೆ ನಿನ್ನ ಕೋಲ್ಮಿಂಚಿನಂತಹ ನುಡಿಗಳು.. ಸ್ವಚ್ಚಂದದ ಭಾವನೆಗಳು.. ಮನದ ಪಿಸುಮಾತುಗಳು..ಎಲ್ಲಕ್ಕೂ ಮಿಗಿಲಾಗಿ  ನಿನ್ನ ನಿಷ್ಕಲ್ಮಶ ಸ್ನೇಹಸಾಗರದಲ್ಲಿ ನಾ ಮುಳುಗಿ ಹೋಗಿದ್ದೇನೆ.. ೩ ದಿನದಲ್ಲಿ ನಡೆದ ಎಲ್ಲಾ ವಿಷಯಗಳನ್ನು ೨ ಹಾಳೆಯ ತುಂಬಾ ತುಂಬಿಸಿ ಅದಕ್ಕೆ ಬಣ್ಣಗಳಿಂದ ಅಲಂಕರಿಸಿ ಎನ್ವೆಲೋಪ್ನಲ್ಲಿ ಬಂದಿಸಿ ಅಂಚೆ ಪೆಟ್ಟಿಗೆಗೆ ಹಾಕಿ ನಿನ್ನ ಉತ್ತರಕ್ಕೆ ಕಾಯುತ್ತಿದ್ದುದರಲ್ಲಿ ಏನೋ ಮಜವಿತ್ತು…ಇದು ನನ್ನ ೪ನೇ ಪತ್ರ ದಯವಿಟ್ಟು ನನ್ನ ಈ ಒಂದು ಪತ್ರಕ್ಕೆ ಉತ್ತರಕೊಡು… ನನಗೆ ನೀನಲ್ಲದೆ ಒಂಟಿತನ ಕಾಡುತಿದೆ…

ನಿನಗೆ ನೆನಪಿದೆಯಾ ಶಾಲೆಯಲ್ಲಿದ್ದಾಗ ಇಬ್ಬರೂ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದರೂ ಪ್ರತಿನಿತ್ಯ ಪತ್ರವಿನಿಮಯವಾಗುತ್ತಿತ್ತು… ಆದರಿಂದು ಹದಿನೈದು ದಿನಗಳಾದರೂ ನಿನ್ನ ಒಂದೂ ಪತ್ರ ನನಗೆ ಬರಲಿಲ್ಲ.. ನನಗೆ ಒಂಟಿತನದ ನೆರಳೂ ಬೀಳದಂತೆ ನನ್ನ ನೆರಳಾಗಿದ್ದ ನೀನು ಇಂದು ಇಲ್ಲದೆ ಕಾರ್ಮೋಡ ಕವಿದಂತೆ ಭಾಸವಾಗುತಿದೆ… ಅಕ್ಕ-ಅಣ್ಣ, ಅಮ್ಮ-ಅಪ್ಪನಿಗಿಂತಲೂ ಮಿಗಿಲಾದ ನನ್ನ ಜೀವದ ಗೆಳತಿಯ ಕಳೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ…. ಒಮ್ಮೆಯಾದರೂ ನನ್ನ ಮನೆಗೆ ಬಂದು ಹೋಗು..ನಿನ್ನ ಮಡಿಲಲ್ಲಿ ಮಲಗಿ ನನ್ನ ನೋವನ್ನೆಲ್ಲಾ ಹಂಚಿಕೊಳ್ಳುತ್ತೇನೆ…. ಕಣ್ಣೀರು ಬಂದರೂ ಒತ್ತಿ ಹಿಡಿದಿರುವೆ ..ನೀ ಬಂದು ಹಿಡಿಯುವೆ ಎಂದು… ಬರುವೆಯಲ್ಲವೇ…??????

-ನಿನ್ನ ಹಾದಿಯನ್ನೇ ನೋಡುತ್ತಿರುವ

ಇಂಚರ

12 Comments »

 1. 1
  amritavarshini Says:

  chennaagide…. nimma patra odi khanditaa bande barutaale nimma gelati…

 2. 2
  svatimuttu Says:

  ಪುಟ್ಟಿ……
  ಧನ್ಯವಾದಗಳು….. ನಾನು ಸಹಾ ಆ ಪತ್ರಕ್ಕಾಗಿ ಕಾಯುತ್ತಿದ್ದೇನೆ….ದಿನಾಗಲೂ ಅವಳ ಜೊತೆ ದೂರವಾಣಿಯಲ್ಲಿ ಮಾತನಾಡಿದರೂ ಪತ್ರದಲ್ಲಿ ಸಿಗುವ ಆತ್ಮೀಯತೆ ಮಾತಿನಲ್ಲಿರುವುದಿಲ್ಲವಲ್ಲವೇ?????

 3. 3
  Pranav.K.R. Says:

  Hi inchara,yaako nim patra odida takshana ello doora hogi matte ee lokakke bandantha bhaava.yaako gotthilla patragalu anda takshanaane manassu estondu prafullathe yinda ulllaasadinda kuniyutte alva? neevu nimma gelathige bareda patrada dhaati ello kaledu hogiruva nanna gelathiya kurithaagitthu antha anstha ide..Aa feel kottiddakke nimge runi.adaada nantara nanna manassinalliye moodida prashne ondu…EE patragalu estondu aathmeeya bhaava tandu kodthave alva ansthu.howdu 10 mins matadidaaga sigo khushigintha patra bareyodralli jasthi ide…..yaarigaadru patra bareyonavendre eegella nagtaare.howdu mareyaagutthiruva aparoopada nidhi galalli adu kooda antha nanna ansike….Pranav

 4. 4
  hneshakumar@gmail.com Says:

  ಇಂಚರವರೆ ನಿಮ್ಮ ಬರವನಿಗೆಳಲಿ ಕೆಲವನ್ನ ಓದಿದೆ,ಸ್ವಾತಿ ಮುತ್ತಿನೋಳಗಣ ಭಾವದ ಬನಿ ಇನ್ನು ಘನಿಕರಿಸುತ ಸಾಗಲಿ……..ಸಾದ್ಯವಾದರೆ ನನ್ನ ಬ್ಲಾಗ್ ಒಮ್ಮೆ ನೋಡಿ….
  sahayaatri.blogspot.com ಧನ್ಯವಾದಗಳು…

 5. 7
  sharanu hullur Says:

  re.. ella blogigalu prema ptrakke jootu biddiddiri yaake?.. Aa baraha bittu bereyadannu bareyoke barodilva?… kriyatmkavaada lekhana virali.

 6. 8
  svatimuttu Says:

  ಶರಣು ಹುಳ್ಳೂರು ರವರೇ,

  ಇದು ಪ್ರೇಮ ಪತ್ರವಲ್ಲ… ಇದು ನಾನು ನನ್ನ ಸ್ನೇಹಿತೆಗೆ ಬರೆದ ಪತ್ರ… ದಯವಿಟ್ಟು ಮತ್ತೊಮ್ಮೆ ಓದಿ ನೋಡಿ…
  ಕ್ರಿಯಾತ್ಮಕವಾಗಿ ಸಹಾ ಬರೆಯಿರಿ ಎಂಬುದನ್ನು ನಾನು ಮೆಚ್ಚುತ್ತೇನೆ… ಆದರೆ……ಒಮ್ಮೆ ಈ ಲೇಖನ ಓದಿ ನೋಡಿ….

 7. 9
  sharanu hullur Says:

  edu onda taraha ade vaasane ede. patra anda maatrakke bari novanneke bariyabeku? patragalendare novina mutegalalla… please, odugarige ullasa koduva lekhana bareyiri. kshamisi nimage neravagi tilisidare kopa barabahudu.

 8. 10
  svatimuttu Says:

  ಶರಣು ಹುಳ್ಳೂರುರವರೇ,
  ಜೀವನದಲ್ಲಿ ಸದಾ ಖುಷಿಯೇ ಇದ್ದರೆ ಚೆನ್ನಾಗಿರುತ್ತಾ ?? ನೀವೆ ಹೇಳಿ????? ನಾನು ಖುಷಿ ನೀಡುವ ಪತ್ರಗಳನ್ನೂ ಬರೆದಿದ್ದೇನೆ.. ದಯಮಾಡಿ ಸಮಯ ಹವಣಿಸಿ ಬೇರೆ ಪತ್ರಗಳನ್ನೂ ಸಹಾ ಓದಿದರೆ ಬಹುಷಃ ನಿಮಗೆ ತಿಳಿಯಬಹುದು….


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: