ನನ್ನ ಮೊದಲ ಕೆಲಸದ ಬಗ್ಗೆ ಒಂದಿಷ್ಟು ತುಂತುರು ಹನಿಗಳು


writing - pen

ಅಂದು ಏಪ್ರಿಲ್ ೧ನೇ ತಾರೀಖು, ನಾ ಮೊದಲ ಬಾರಿಗೆ ಕೆಲಸ ಮಾಡಲು ಕೆಲಸಕ್ಕೆ ಸೇರಿದ ದಿನ… ನನ್ನ ಕಾಲ ಮೇಲೆ ನಿಲ್ಲಲು ಅವಕಾಶ ಸಿಕ್ಕ ಮೊದಲ ದಿನ… ನಾನು ಒಂದು ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಲ್ಲಿ faculty ಆಗಿ ಕೆಲಸಕ್ಕೆ ಸೇರಿದೆ…ಹೊಸ ದಿನ, ಹೊಸ ಜಾಗ, ಮನಸ್ಲಲ್ಲಿ ಕಳವಳ.. ಆ ಸುತ್ತಮುತ್ತಲಿನ ಪರಿಸರ ..ಜನ ಹೇಗೆ ಇರುತ್ತಾರೋ, ಎಂದೆಲ್ಲಾ ನೂರೆಂಟು ಯೋಚನೆಗಳು ಕಾಡತೊಡಗಿತ್ತು… ಆದರೂ ಸಂತೋಷದಿಂದಲೇ ಬೆಳಿಗ್ಗೆ ಬೇಗನೆ ಎದ್ದು ದೇವರಿಗೆ ಕೈ ಮುಗಿದು ತಿಂಡಿ ತಿಂದು ಇನ್ಸ್ಟಿಟ್ಯೂಟ್ ಗೆ ತಂದೆಯಿಂದ drop ತೆಗೆದುಕೊಂಡೆ.. ಹೋದ ತಕ್ಷಣ ಒಬ್ಬ ಸರ್ ಅವರ ಪರಿಚಯ ಮಾಡಿಕೊಂಡು, ಅಲ್ಲಿನ ವಾರಸುದಾರರಿಗೆ ಕರೆ ಮಾಡಿ ನಾನು ಕೆಲಸಕ್ಕೆ ಬಂದಿರುವುದಾಗಿ ತಿಳಿಸಿದರು,ಆ ಸರ್ ಸಹಾ ನನಗೆ ಹಾರ್ಧಿಕವಾದ ಸ್ವಾಗತ ಕೋರಿ ಶುಭ ಹಾರೈಸಿದರು. ಮೊದಲಿಗೆ ಅಲ್ಲಿದ್ದ ನನ್ನ ಜೊತೆಗೆ ಕೆಲಸ ಮಾಡುವ ಇತರೆ facultyಯವರ ಪರಿಚಯ ಮಾಡಿಕೊಂಡೆ. ಅಂದು ಅವರಲ್ಲಿ ಒಬ್ಬರ ಹುಟ್ಟಿದಹಬ್ಬವಿದ್ದುದರಿಂದ ಅವರು ಎಲ್ಲರಿಗೂ ಸಿಹಿ ಹಂಚಿದರು..ಅಲ್ಲಿದ್ದ faculty ನನಗೆ ತುಂಬಾ ಸಹಕರಿಸಿ, ಎಲ್ಲಾ ಕೆಲಸಗಳ ಬಗ್ಗೆ ತಿಳಿ ಹೇಳಿದರು. ನಂತರ ಎಲ್ಲಾ ವಿದ್ಯಾರ್ಥಿಗಳ ಪರಿಚಯ ಮಾಡಿಕೊಳ್ಳುತ್ತಾ ಬಂದೆ.. ಹಾಗೂ ಮೊದಲ ಬಾರಿಗೆ ಕ್ಲಾಸ್ ತೆಗೆದುಕೊಂಡೆ.. ಅಂದು ತುಂಬಾ ಕಷ್ಟವಾದ ವಿಷಯವನ್ನೇ ಹೇಳಿಕೊಡಲು ನಮ್ಮ ಸರ್ ತಿಳಿಸಿದರು.ನಾನು ಧೈ ರ್ಯವಾಗಿ ಕ್ಲಾಸ್ ಮಾಡಿ ಮುಗಿಸಿದೆ.. ಬಂದು ಹೋಗುತ್ತಿದ್ದ ನನ್ನ ವಿದ್ಯಾರ್ಥಿಗಳು mam, ಮೇಡಮ್, ಅಕ್ಕ ಅಂತೆಲ್ಲಾ ವಿಧ-ವಿಧವಾಗಿ ಕರೆಯುತ್ತಿದ್ದರು.. ಅವರೆಲ್ಲರೂ ಹಾಗೆ ಕರೆಯುತ್ತಿದ್ದಾಗ ನನ್ನ ಸ್ಥಾನ ಅಲ್ಲಿ ಏನು ಎಂಬುದರ ಅರಿವು ಪದೇ-ಪದೇ ನನಗೆ ಆಗುತ್ತಿತ್ತು. ಕೆಲವರು ತೀರಾ ವಿನಮ್ರ ಭಾವದಿಂದ ಗುಡ್ ಮಾರ್ನಿಂಗ್ ಮೇಡಮ್ ಅಂದಾಗ ನನಗೆ ಒಂದು ತರಹ ಖುಷಿಯಾಗುತ್ತಿತ್ತು. ನನಗೆ ಎಷ್ಟು ಬೆಲೆಯಿದೆ ಇಲ್ಲಿ ಎಂದು ಅಂದುಕೊಳ್ಳುತ್ತಿದ್ದೆ…. (ಏಕೆಂದರೆ ಆಗ ತಾನೆ ಕಾಲೇಜು ಬಿಟ್ಟು ಹೊರಬಂದ ಸಮಯ.. ನಾನು ಬೇರೆಯವರಿಗೆ ಆತರಹದ ಗೌರವ ನೀಡುತ್ತಿದೆ,…ಆದರೆ ನನಗೆ ಆತರಹದ ಗೌರವ ಸಿಕ್ಕಿದ್ದು ಒಂದು ತರಹ ಹೊಸದಾಗಿ ಇತ್ತು..:) ).. “ಬರುವವರು ಬರುತ್ತಿದ್ದರು..ಹೋಗುವವರು ಹೋಗುತ್ತಿದ್ದರು..ಆದರೆ ನಾವು ಮಾತ್ರ ನಿಶ್ಚಲವಾಗಿದ್ದೆವು..” ನಮ್ಮ ಜೀವನವೂ ಹಾಗೆ ಅಲ್ಲವೇ??? ಮಧ್ಯಾಹ್ನ  ಊಟಕ್ಕೆ ಮನೆಗೆ ಬಂದು ಊಟ ಮುಗಿಸಿ ಮತ್ತೆ ಇನ್ಸ್ಟಿಟ್ಯೂಟ್ಗೆ  ಬಂದೆ…ಎಲ್ಲರೂ ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದರು.. ನಮ್ಮ ಹುಟ್ಟಿದಹಬ್ಬದ ಹುಡುಗ(ಸರ್)…. part-T (party) ಕೊಡಿಸಿದರು.. ಎಷ್ಟೋ ಜನ ನನಗೆ ಅಲ್ಲಿ ಕೊಡುವ ಸಂಭಾವನೆ ಕಡಿಮೆಯೆಂದು, ಅಲ್ಲಿ ಕೆಲಸ ಮಾಡಬಾರದೆಂದು ಹೇಳಿದರು..ಆದರೆ ನನಗೆ ಮುಖ್ಯವಾಗಿ ಬೇಕಾಗಿದ್ದುದು ಕೆಲಸ, ಹಾಗು ಮನೆಯಲ್ಲಿ ಅನಾವಶ್ಯಕವಾಗಿ ಕಾಲಹರಣ ಮಾಡುವುದನ್ನು ತಡೆಯಲೇಬೇಕಿತ್ತು.. ಜೊತೆಗೆನನ್ನಲ್ಲಿರುವ ವಿದ್ಯೆಯನ್ನು ದಾನ ಮಾಡುವುದು ಶ್ರೇಷ್ಟವಾದ ಕೆಲಸ ಎಂದು ನನಗೆ ಕೊಡುವ ಸಂಭಾವನೆಗೆ ಬೆಲೆ ಕೊಡದೆಯೇ ಶ್ರದ್ದೆಯಿಟ್ಟು ಕೆಲಸ ಮಾಡಿದೆ. ಸಂಜೆ ಮನೆಗೆ ಬಂದಾಗ ಏನೋ ಉತ್ಸಾಹ ಉಲ್ಲಾಸವಿತ್ತು. ಮನೆಯಲ್ಲಿ ಎಲ್ಲರಿಗು ಅಂದಿನ ದಿನದ ಅನುಭವದ ಬಗ್ಗೆ ಹೇಳಿದೆ.ಮಾರನೆಯ ದಿನ ಕೆಲಸಕ್ಕೆ ಹೋಗಲು ಮನ ತುಡಿಯುತ್ತಿತ್ತು. ಒಂದೇ ದಿನಕ್ಕೆ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ. ಭವಿಷ್ಯದ ಬಗ್ಗ್ಗೆ ಆಸಕ್ತಿ ಮೂಡಿತ್ತು, ಆಸೆ ಹುಟ್ಟಿತ್ತು. ಆ ಸುಂದರ ಪ್ರಪಂಚದಲ್ಲಿ ಮಿನುಗಲು ನನಗೊಂದು ಅವಕಾಶ ಸಿಕ್ಕಿತ್ತು. ಇಂದಿಗೂ  ನನಗೆ ಇದೆ ಭಾವನೆಗಳಿವೆ..ನಾಳೆ ಮತ್ತೆ ಕೆಲಸಕ್ಕೆ ಹೋಗಲು ಕಾಯುತಿರುವೆ..ಇಂದಿಗೂ ಕಾಲೆಳೆಯುವವರಿದ್ದಾರೆ..ಆದರೆ ನಮ್ಮ ಇತಿ-ಮಿತಿಗಳಲ್ಲಿ ನಾವಿದ್ದು, ಶ್ರಮಪಟ್ಟು ನಮ್ಮ ಕೆಲಸಮಾಡಿಕೊಂಡು, ಇತರರೊಡನೆ ಸ್ನೇಹ ಭಾವದಿಂದ ಇದ್ದುಬಿಟ್ಟರೆ ಯಾರ ಮಾತು ಸಹಾ ನಮ್ಮನ್ನು ಕೊರೆಯಲಾರದು..

ಮತ್ತೆ ಇನ್ನೊದು ವಿಷಯ ಹೇಳುವುದು ಮರೆತೆ.. ನನಗೆ ನನ್ನ ವಿದ್ಯಾರ್ಥಿಯೊಬ್ಬಳು ಒಮ್ಮೆ ಅವರ ಮನೆಯಲ್ಲಿ ಅರಳಿದ್ದ ಗುಲಾಬಿ ಹೂವನ್ನು (ಪಿಂಕ್) ತಂದು ಕೊಟ್ಟಳು.. ಆಗ ನಿಜವಾಗಲೂ ನನಗೆ ನನ್ನ ಶಾಲೆಯ ನೆನಪಾಯಿತು..ಯಾಕೆಂದರೆ ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಮಾರ್ಕೆಟಿಗೆ ಬೇಕಂತಲೇ ಹೋಗಿ ಮೇಡಂಗೆ ಹೂ ತೆಗೆದುಕೊಂಡು ಹೋಗುತ್ತಿದ್ದೆ.. ಅದೇ ನೆನಪಿನ ಛಾಯೆ ಅಂದು ನನ್ನಲ್ಲಿ ಮೂಡಿತು..
ಹಾಗು ಕೆಲವರು ನನ್ನ “ನಗು”ವಿನ ಬಗ್ಗೆ ಕಾಮೆಂಟ್ ಮಾಡಿದರು..”ಮೇಡಂ ನೀವು ಸದಾ ನಗುತ್ತಲೇ ಸ್ವಾಗತ ಕೋರುತ್ತೀರಿ ಸದಾ ಹೀಗೆಯೇ ನಗುತ್ತಿರಿ …ನಿಮ್ಮ ನಗು ಚಂದ ” ಎಂದಿದ್ದರು..

ಒಬ್ಬ ವಿದ್ಯಾರ್ಥಿ ಅವರ ಕೋರ್ಸ್ ಮುಗಿಸಿ ಹೋದರೂ ಇನ್ನೂ ನನ್ನ ಬಗ್ಗೆ ವಿಚಾರಿಸಿಕೊಳ್ಳುತ್ತಿರುತ್ತಾರಂತೆ..
ಹೀಗೆ ಏನೆಲ್ಲಾ ಸಣ್ಣ-ಪುಟ್ಟ ವಿಷಯಗಳು ತುಂಬಾನೇ ಖುಷಿ ನೀಡುತ್ತದೆ.. ಏನೆಲ್ಲಾ ಅನುಭವಗಳಾಗುತ್ತದೆ.. ಕಹಿಗಿಂತಲೂ ಸಿಹಿಯೇ ಹೆಚ್ಚು ..ನಮಗೆ ನಾವು ಕೆಲಸ ಮಾಡುವ ಪರಿಸರ ಚೆನ್ನಾಗಿದ್ದಾರೆ ಎಷ್ಟು ನೆಮ್ಮದಿ ಸಿಗುತ್ತದೆಂದು ಅರಿವಾಯಿತು..ಅನುಭವವೂ ಆಯಿತು… ಎಲ್ಲಾ ಅನುಭವಗಳ ನಡುವೆ ಹೋಗುವ ಬರುವ ಜನರೊಡನೆ ಮಿಂದು ಅರಿತು..ಕೆಲವು ಸಿಹಿ ನೆನಪುಗಳ ನಿಮ್ಮೆಲ್ಲರ ಬಳಿ ಹಂಚಿಕೊಂಡೆ….ಸ್ವೀಟ್ ಆಗಿದೆ ತಾನೇ??? ಏನಂತಿರಾ???

19 Comments »

 1. 1
  ವಿಜಯರಾಜ್ ಕನ್ನಂತ Says:

  savinenapugaLu bEku saviyalee baduku 🙂

 2. 2
  amritavarshini Says:

  ತುಂಬಾ ಚೆನ್ನಾಗಿ ಬರೆದಿದ್ದೀರಾ ಅಕ್ಕಾ.. ಅಷ್ಟೇ ಸತ್ಯ ಕೂಡ… ನಿಮ್ಮ ಅನುಭವವನ್ನು ಬಿಂಬಿಸಿದ ರೀತಿ ಬಲು ಅದ್ಭುತ… ಶುಭವಾಗಲಿ ಅಕ್ಕ ನಿಮ್ಮ ಬಾಳಿಗೆ…

  ನಿಮ್ಮ ಪ್ರೀತಿಯ ತಂಗಿ
  -ಭಾವನಾ

 3. ಇಂಚರ,
  ಮೇಡಂ ಆಗಿ ಬಡ್ತಿ ಸಿಕ್ಕಿದ್ದು ಕೇಳಿ ಖುಷಿ ಆಯಿತು, ಅನುಭವದ ಲೇಖನ ಚೆನ್ನಾಗಿದೆ. ಯಶಸ್ಸಿನ ಪಯಣ ಸಾಗುತಲಿರಲಿ.

 4. 4
  shivu.k Says:

  Inchara medam,

  modala anubhava yavagalu vibinnavagiruthe alva….lekana chennagide..

 5. 5
  Guru Says:

  Inchara tumba chenagide ninna article. Heege bere vishayagala kadegu swalpa gamana kodi. Odugara hrudayakke hattiravagi.

  Good luck

 6. 6
  svatimuttu Says:

  ವಿಜಯರಾಜ್ ಕನ್ನಂತ ಅವರೇ,
  ಹೌದು…. ನಿಮ್ಮ ಮಾತು ಸರಿ….. ಸವಿನೆನಪುಗಳೇ ನಮ್ಮ ಬಾಳಿಗೆ ಚೆಲ್ಲುವ ಮುಂಗಾರುಮಳೆ….
  ನನ್ನ ಬ್ಲಾಗಿಗೆ ಬಂದು ನನ್ನ ಲೇಖನವನ್ನು ಓದಿದಕ್ಕೆ ಧನ್ಯವಾದಗಳು…

 7. 7
  svatimuttu Says:

  ರಾಜೇಶ್ ಅವರೇ,
  ಧನ್ಯವಾದಗಳು…..

 8. 8
  svatimuttu Says:

  ಶಿವು ಅವರೇ,
  ಹೌದು….. ಮೊದಲ ಅನುಭವ ಎಂದಿಗೂ ಚೆನ್ನ..(ever green)…
  ಧನ್ಯವಾದಗಳು

 9. 9
  svatimuttu Says:

  ಗುರು ಅಣ್ಣ,
  ಆಯ್ತು..ನೀವು ಹೇಳಿದಹಾಗೆ ಮಾಡುತ್ತೇನೆ…..:)
  ಧನ್ಯವಾದಗಳು ಅಣ್ಣ

 10. Tumba chennagi bardideera inchara…nenapu nijakkoo sihi…..barita iri…olledaagli…..swalpa hechchu samaya tagondu….swalpa hechchu taalmeyinda enaadroo srushtisoke prayatna maadi..nimma barvanige tumbane chenda ide…..Shubhaashayagalondige,
  Sunil.

 11. ನಮಸ್ತೆ ಕಣ್ರೀ…
  ರೀ.. ನಾನು ಸ್ವಲ್ಪದಿನ ಬ್ಲಾಗ್ ಪ್ರಪಂಚದ ಕಡೆ ಗಮನವನ್ನೇ ಕೊಟ್ಟಿರಲಿಲ್ಲ,ಅದಕ್ಕೆ ನಿಮ್ಮ ಬ್ಲಾಗ್ ಕಡೆ ಬರಕ್ಕಾಗಲಿಲ್ಲ.ಕ್ಷಮಿಸಿ..
  ಈಗ ಬಂದು ನಿಮ್ಮ ಬ್ಲಾಗ್ ನೋಡಿದ್ರೆ ನೆನಪನಾಲೆಯನ್ನೇ ಹರಿಸಿದ್ದೀರಲ್ಲ ..ರೀ.!
  ಅಂದ ಹಾಗೆ ನಿಮ್ಮ ಮೊದಲ ಅನುಭವದ “….ತುಂತುರು ಹನಿ ” ಚೆನ್ನಾಗಿ ಹನಿಹನಿಯಾಗಿ ಬಂದಿದೆ.

 12. 12
  manju Says:

  ತುಂಬಾ ಚೆನ್ನಾಗಿ ಬರೆದಿದ್ದೀರಾ ಅಕ್ಕಾ.. nijavagiu chennagide……….

 13. 14
  BK bHAT Says:

  Nimma lekhana tumba chennagide…….odi tumba khushi aytu….:)
  aa tunturu hsnigalannu chimukisi manavannu thampaagisidiri,,..
  Dhanyanaadagalu….

 14. 16
  Laxman Says:

  inchar avare
  tumba chennagi bandide baraha
  Nanu bangalorige baruva modalu institute nadasta idde.
  A kalisuva Khushi mattedarallu sigalu sadyavilla

  Laxman

 15. 18
  svatimuttu Says:

  ಸುನಿಲ್ ಅವರೇ,
  ಧನ್ಯವಾದಗಳು, ಪ್ರಯತ್ನ ಪಡುತ್ತೇನೆ… ನಿಮ್ಮ ಆಶಿರ್ವಾದ ಸದಾ ನಮ್ಮ ಮೇಲಿರಲಿ..

 16. 19
  svatimuttu Says:

  ನೇರನುಡಿಯವನು ಅವರೇ,
  ತಾವು ಬಂದು ನನ್ನ ಬ್ಲಾಗಿಗೆ ಬಂದು ನನ ಬರಹ ನೋಡಿ ಹೋದದ್ದು ತುಂಬಾ ಸಂತೋಷದ ವಿಷಯ, ಧನ್ಯವಾದಗಳು..ಆಗಾಗ ಬರುತ್ತಿರಿ


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: