ಪ್ರೀತಿಯ ಓದುಗರೇ,
ಮೊದಲ ಬಾರಿಗೆ ಸ್ವಲ್ಪ different ಆಗಿ ಹನಿಗಳು ಬರೆಯೋ ಆಸೆಯಾಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ, ಸುಳಿವೇ ಇಲ್ಲದೆ ಮನಸ್ಸಿನಿಂದ ನೇರವಾಗಿ ಪೇಪರ್ ಮೇಲೆ ಬಂದು ಇಳಿದ ಹನಿಗಳಿವು… ಚೆನ್ನಾಗಿದ್ದರೆ/ತಪ್ಪಿದ್ದರೆ ದಯಮಾಡಿ ತಿಳಿಸಿ…ಮುಂದೆ ಇನ್ನು ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ….
ದೀಪ
ಹೊರಾಂಗಣವ ಅರಳಿಸಿ
ತನ್ನ ಆಂತರ್ಯದೊಳಗೆ ತನಗೇ
ಅರಿತೂ ಅರಿಯದಂತೆ ಅಡಗಿ ಹೋಯಿತು
ಮಳೆ
ಅವಳ ನೆನಪುಗಳನ್ನು
ತಡೆಯಲಾರದೆ ಪದೇ-ಪದೇ
ದಡಕ್ಕೆ ಬಂದು ಎಸೆದು ಹೋಗುವ
ಅಲೆಗಳ ಸ್ನಿಗ್ಢ ಪರಿಸ್ಥಿತಿ.
ನಂಬಿಕೆ
ಅಂದು ಮಗನ ಕೊನೆಯ Train ಮಿಸ್ಸಾದರೂ
ಅವ ಬಂದೇ ಬರುವನೆಂದು
ಮನೆ ಬಾಗಿಲಿಗೆ ತೋರಣವ ಕಟ್ಟಿ
ಆರತಿ ಹಿಡಿದು ನಿಂದಿಹಳು.
ಹೃದಯಾಂತರಾಳ
ನಿನ್ನ ಕಂಡ ಕ್ಷಣದಿಂದಲೂ
ರಾಶಿ-ರಾಶಿಯಾಗಿ ಗುಲಾಬಿ
ಹೂಗಳು ಅರಳಿಬಿಟ್ಟಿವೆ.
ಪೈಪೋಟಿ
ಹನಿಗಳು ಬರೆಯಲೆಂದು
ಕುಳಿತಾಕ್ಷಣ
ಹೊರಗಡೆ ಮಳೆ ಹನಿಗಳು
ಶುರುವಾಗಿಬಿಡೋದೆ????
ಕಾಮನಬಿಲ್ಲು
ರವಿಯು ತೋರಿಸಿದ
ಕೋಪವನ್ನುತಾಳಲಾರದೆ
ಮೇಘಗಳು ಕಣ್ಣೀರ ಧಾರೆಯನ್ನೇ
ಭುವಿಗೆ ಹರಿಸಿದಾಗ..
ಅವುಗಳನ್ನು ಸಂತೈಸಲೆಂದೇ ಮೂಡಿತು
ಆಕಾಶದಲ್ಲಿ ರಂಗು-ರಂಗಿನ ಚಿತ್ತಾರ!
ಅವಳ ಬೆಚ್ಚನೆಯ ನೆನಪು
ಚಳಿ ಎನ್ನುತ್ತಿದ್ದಂತೆ
ಮುತ್ತಿಟ್ಟು-ಅಪ್ಪಿ
ಕುಳಿತುಬಿಟ್ಟಳು.
ಚುಕ್ಕಿಗಳು
“ಮಕ್ಕಳಿರಲವ್ವ ಮನೆತುಂಬ”
ಎಂಬ ಸಾಲನ್ನು ಕೇಳುತ್ತಿದ್ದಂತೆಯೇ
ಬಾನು ಇಷ್ಟೊಂದು
ಮಕ್ಕಳನ್ನು ಹಡೆದುಬಿಟ್ಟಳು.
ನನ್ನವನು
ಮುತ್ತು ಕೊಡಬೇಕೆಂತಿದ್ದೆ
ಒಂದೂ ಬಿಡದೆ
ಎಲ್ಲಾ ಮುತ್ತುಗಳನ್ನು ಕದ್ದು ಬಿಟ್ಟ.
********