ಇರುಳಲ್ಲಿ ಅರಳಿದ್ದು


ಪ್ರೀತಿಯ ಓದುಗರೇ,

ಮೊದಲ ಬಾರಿಗೆ ಸ್ವಲ್ಪ different ಆಗಿ ಹನಿಗಳು ಬರೆಯೋ ಆಸೆಯಾಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ,  ಸುಳಿವೇ ಇಲ್ಲದೆ ಮನಸ್ಸಿನಿಂದ ನೇರವಾಗಿ ಪೇಪರ್ ಮೇಲೆ ಬಂದು ಇಳಿದ ಹನಿಗಳಿವು… ಚೆನ್ನಾಗಿದ್ದರೆ/ತಪ್ಪಿದ್ದರೆ ದಯಮಾಡಿ ತಿಳಿಸಿ…ಮುಂದೆ ಇನ್ನು ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ….

808890-FB

ದೀಪ
ಹೊರಾಂಗಣವ ಅರಳಿಸಿ
ತನ್ನ ಆಂತರ್ಯದೊಳಗೆ ತನಗೇ
ಅರಿತೂ ಅರಿಯದಂತೆ ಅಡಗಿ ಹೋಯಿತು

ಮಳೆ
ಅವಳ ನೆನಪುಗಳನ್ನು
ತಡೆಯಲಾರದೆ ಪದೇ-ಪದೇ
ದಡಕ್ಕೆ ಬಂದು ಎಸೆದು ಹೋಗುವ
ಅಲೆಗಳ ಸ್ನಿಗ್ಢ ಪರಿಸ್ಥಿತಿ.

ನಂಬಿಕೆ

ಅಂದು ಮಗನ ಕೊನೆಯ Train ಮಿಸ್ಸಾದರೂ
ಅವ ಬಂದೇ ಬರುವನೆಂದು
ಮನೆ ಬಾಗಿಲಿಗೆ ತೋರಣವ ಕಟ್ಟಿ
ಆರತಿ ಹಿಡಿದು ನಿಂದಿಹಳು.

ಹೃದಯಾಂತರಾಳ
ನಿನ್ನ ಕಂಡ ಕ್ಷಣದಿಂದಲೂ
ರಾಶಿ-ರಾಶಿಯಾಗಿ ಗುಲಾಬಿ
ಹೂಗಳು ಅರಳಿಬಿಟ್ಟಿವೆ.

ಪೈಪೋಟಿ
ಹನಿಗಳು ಬರೆಯಲೆಂದು
ಕುಳಿತಾಕ್ಷಣ
ಹೊರಗಡೆ ಮಳೆ ಹನಿಗಳು
ಶುರುವಾಗಿಬಿಡೋದೆ????

ಕಾಮನಬಿಲ್ಲು
ರವಿಯು ತೋರಿಸಿದ
ಕೋಪವನ್ನುತಾಳಲಾರದೆ
ಮೇಘಗಳು ಕಣ್ಣೀರ ಧಾರೆಯನ್ನೇ
ಭುವಿಗೆ ಹರಿಸಿದಾಗ..
ಅವುಗಳನ್ನು ಸಂತೈಸಲೆಂದೇ ಮೂಡಿತು
ಆಕಾಶದಲ್ಲಿ ರಂಗು-ರಂಗಿನ ಚಿತ್ತಾರ!

ಅವಳ ಬೆಚ್ಚನೆಯ ನೆನಪು
ಚಳಿ ಎನ್ನುತ್ತಿದ್ದಂತೆ
ಮುತ್ತಿಟ್ಟು-ಅಪ್ಪಿ
ಕುಳಿತುಬಿಟ್ಟಳು.

ಚುಕ್ಕಿಗಳು
“ಮಕ್ಕಳಿರಲವ್ವ ಮನೆತುಂಬ”
ಎಂಬ ಸಾಲನ್ನು ಕೇಳುತ್ತಿದ್ದಂತೆಯೇ
ಬಾನು ಇಷ್ಟೊಂದು
ಮಕ್ಕಳನ್ನು ಹಡೆದುಬಿಟ್ಟಳು.

ನನ್ನವನು

ಮುತ್ತು ಕೊಡಬೇಕೆಂತಿದ್ದೆ
ಒಂದೂ ಬಿಡದೆ
ಎಲ್ಲಾ ಮುತ್ತುಗಳನ್ನು ಕದ್ದು ಬಿಟ್ಟ.

********

18 Comments »

 1. 1
  amritavarshini Says:

  1st attempt nalle success aagiddeera akka… beautiful… especialy ದೀಪ,
  ಮಳೆ & ನಂಬಿಕೆ superb.. superb and realy superb…. keep it up… kaayta irteevi innastu hanigalige…. 🙂

 2. 3

  ನಿಮ್ಮ ಎಲ್ಲ ಚುತುಕುಗಳು ಚೆನ್ನಾಗಿವೆ….
  ಕೊನೆಯ ಚುತುಕಿನ ತುಂಟತನ…
  ಚುಕ್ಕಿಗಳು…
  ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿವೆ….

  ಕಡಿಮೆ ಶಬ್ಧಗಳಲ್ಲಿ ಭಾವಗಳನ್ನು ಸಮರ್ಥವಾಗಿ ಸೆರೆಹಿಡಿದ್ದೀರಿ….
  ಅದು ಬಹಳ ಕಷ್ಟ…

  ಅಭಿನಂದನೆಗಳು..

 3. 5
  guru Says:

  ಮೊದಲ ಪ್ರಯತ್ನದಲ್ಲೆ ಆಕಾಶದ ತುಂಬೆಲ್ಲಾ ಹನಿಗಳ ರಂಗೋಲಿ, ಮಳೆಹನಿ ಪ್ರಾರಂಭವಾಗಿದೆ, ಅದು ಸಮುದ್ರವಾಗಲೆಂದು ಹಾರೈಸುವೆ……………

 4. ಇಂಚರ,
  ಕಡಿಮೆ ಸಾಲುಗಳಲ್ಲಿ ಹೆಚ್ಚಿನದನ್ನು ಹೇಳೋ ಪ್ರಯತ್ನ, ಸೊಗಸಾಗಿ ಉದುರಿವೆ ಹನಿಗಳು…

 5. 9

  Hi Sh,

  Tumbaa chennagive. Nanage bahala ishtavaada hanigaLu :

  ಕಾಮನಬಿಲ್ಲು
  ಅವಳ ಬೆಚ್ಚನೆಯ ನೆನಪು
  ಚುಕ್ಕಿಗಳು
  ನನ್ನವನು
  All the best, heege munduvareyali hanigaLa surimaLe 🙂

 6. 11
  shivu.k Says:

  ಈ ರೀತಿಯ ಚುಟುಕುಗಳೆಂದರೆ ನನಗೆ ತುಂಬಾ ಇಷ್ಟ.

  ಬಾಯಿಗೆ ಹಾಕಿಕೊಂಡ ತಕ್ಷಣ ಕರಗಿಹೋಗುವ ಪೆಪ್ಪರ್ ಮೆಂಟಿನಂತೆ. ಬಾಯಲ್ಲಿ ಇಲ್ಲದಿದ್ದರೂ ಅದರ ಸ್ವಾದ ಉಳಿಯುವಂತೆ ಈ ಚುಟುಕುಗಳನ್ನು ನೆನಪಾಗುತ್ತವೆ.

  ಪೈಪೋಟಿ, ಮತ್ತು ಕಾಮನಬಿಲ್ಲು ತುಂಬಾ ಇಷ್ಟವಾಯಿತು…

 7. 13

  Inchara,
  Hosa prayatna swagatarha…..
  Hanigalu mugdavaagi minugta ive…….:-) kushi kottive 🙂
  Hage nange ansiddu….u can write better….next time ge kaaaytirtivi 🙂
  All the best……
  🙂

  • 14
   svatimuttu Says:

   ಸುನಿಲ್ ಅವರೇ,
   ನಾನೇನೋ ಬರೆದೆ, ಈಗ ಅದನ್ನು ಮಿನುಗಿಸುತ, ಆ ಖುಷಿಯನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಕರ್ತವ್ಯ ನಿಮ್ಮದೂ ಸಹ….
   ಮುಂದೆ ಇನ್ನು ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ
   ಧನ್ಯವಾದಗಳು….

 8. ಮೊದಲ ಪ್ರಯತ್ನದಲ್ಲೇ ಚೆನ್ನಾಗಿ ಬರೆದಿದ್ದೀರಿ.. ಸ್ವಲ್ಪ ತೊದಲು ಅಲ್ಲಲ್ಲಿ ಸೂಕ್ಷ್ಮ ರೀತಿಯಲ್ಲಿವೆ… ಮುಂದೆ ಅವು ಸರಿಹೋಗುತ್ತವೆ, ಹೀಗೆ ಬರೆಯುತ್ತಿರಿ..

  –ಎ.ಕಾ.ಗುರುಪ್ರಸಾದಗೌಡ. ;www.balipashu.blogspot.com; hanebaraha@gmail.com.

 9. 17

  ಮೊದಲ ಪ್ರಯತ್ನ ಬೊಂಬಾಟ್. ಆದರೆ ನೀವು ಇನ್ನೂ ಚೆನ್ನಾಗಿ ಬರೆಯಬಹುದು ಅನ್ನಿಸುತ್ತದೆ.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: