ಇರುಳಲ್ಲಿ ಅರಳಿದ್ದು


ಪ್ರೀತಿಯ ಓದುಗರೇ,

ಮೊದಲ ಬಾರಿಗೆ ಸ್ವಲ್ಪ different ಆಗಿ ಹನಿಗಳು ಬರೆಯೋ ಆಸೆಯಾಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ,  ಸುಳಿವೇ ಇಲ್ಲದೆ ಮನಸ್ಸಿನಿಂದ ನೇರವಾಗಿ ಪೇಪರ್ ಮೇಲೆ ಬಂದು ಇಳಿದ ಹನಿಗಳಿವು… ಚೆನ್ನಾಗಿದ್ದರೆ/ತಪ್ಪಿದ್ದರೆ ದಯಮಾಡಿ ತಿಳಿಸಿ…ಮುಂದೆ ಇನ್ನು ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ….

808890-FB

ದೀಪ
ಹೊರಾಂಗಣವ ಅರಳಿಸಿ
ತನ್ನ ಆಂತರ್ಯದೊಳಗೆ ತನಗೇ
ಅರಿತೂ ಅರಿಯದಂತೆ ಅಡಗಿ ಹೋಯಿತು

ಮಳೆ
ಅವಳ ನೆನಪುಗಳನ್ನು
ತಡೆಯಲಾರದೆ ಪದೇ-ಪದೇ
ದಡಕ್ಕೆ ಬಂದು ಎಸೆದು ಹೋಗುವ
ಅಲೆಗಳ ಸ್ನಿಗ್ಢ ಪರಿಸ್ಥಿತಿ.

ನಂಬಿಕೆ

ಅಂದು ಮಗನ ಕೊನೆಯ Train ಮಿಸ್ಸಾದರೂ
ಅವ ಬಂದೇ ಬರುವನೆಂದು
ಮನೆ ಬಾಗಿಲಿಗೆ ತೋರಣವ ಕಟ್ಟಿ
ಆರತಿ ಹಿಡಿದು ನಿಂದಿಹಳು.

ಹೃದಯಾಂತರಾಳ
ನಿನ್ನ ಕಂಡ ಕ್ಷಣದಿಂದಲೂ
ರಾಶಿ-ರಾಶಿಯಾಗಿ ಗುಲಾಬಿ
ಹೂಗಳು ಅರಳಿಬಿಟ್ಟಿವೆ.

ಪೈಪೋಟಿ
ಹನಿಗಳು ಬರೆಯಲೆಂದು
ಕುಳಿತಾಕ್ಷಣ
ಹೊರಗಡೆ ಮಳೆ ಹನಿಗಳು
ಶುರುವಾಗಿಬಿಡೋದೆ????

ಕಾಮನಬಿಲ್ಲು
ರವಿಯು ತೋರಿಸಿದ
ಕೋಪವನ್ನುತಾಳಲಾರದೆ
ಮೇಘಗಳು ಕಣ್ಣೀರ ಧಾರೆಯನ್ನೇ
ಭುವಿಗೆ ಹರಿಸಿದಾಗ..
ಅವುಗಳನ್ನು ಸಂತೈಸಲೆಂದೇ ಮೂಡಿತು
ಆಕಾಶದಲ್ಲಿ ರಂಗು-ರಂಗಿನ ಚಿತ್ತಾರ!

ಅವಳ ಬೆಚ್ಚನೆಯ ನೆನಪು
ಚಳಿ ಎನ್ನುತ್ತಿದ್ದಂತೆ
ಮುತ್ತಿಟ್ಟು-ಅಪ್ಪಿ
ಕುಳಿತುಬಿಟ್ಟಳು.

ಚುಕ್ಕಿಗಳು
“ಮಕ್ಕಳಿರಲವ್ವ ಮನೆತುಂಬ”
ಎಂಬ ಸಾಲನ್ನು ಕೇಳುತ್ತಿದ್ದಂತೆಯೇ
ಬಾನು ಇಷ್ಟೊಂದು
ಮಕ್ಕಳನ್ನು ಹಡೆದುಬಿಟ್ಟಳು.

ನನ್ನವನು

ಮುತ್ತು ಕೊಡಬೇಕೆಂತಿದ್ದೆ
ಒಂದೂ ಬಿಡದೆ
ಎಲ್ಲಾ ಮುತ್ತುಗಳನ್ನು ಕದ್ದು ಬಿಟ್ಟ.

********

18 Comments »

  1. 1
    amritavarshini Says:

    1st attempt nalle success aagiddeera akka… beautiful… especialy ದೀಪ,
    ಮಳೆ & ನಂಬಿಕೆ superb.. superb and realy superb…. keep it up… kaayta irteevi innastu hanigalige….🙂

    • 2
      svatimuttu Says:

      ಅಮೃತ,
      ನಿಮ್ಮ ಅಭಿಪ್ರಾಯ ಓದಿ ತುಂಬಾ ಖುಷಿ ಆಯಿತು.. ಧನ್ಯವಾದಗಳು….
      ನಾ ಆದಷ್ಟು ಬೇಗ ಒಳ್ಲೆಯ ಹನಿಗಳಿಗೆ ಜೀವ ತುಂಬಲು ಪ್ರಯತ್ನಿಸುತ್ತೇನೆ…

  2. 3

    ನಿಮ್ಮ ಎಲ್ಲ ಚುತುಕುಗಳು ಚೆನ್ನಾಗಿವೆ….
    ಕೊನೆಯ ಚುತುಕಿನ ತುಂಟತನ…
    ಚುಕ್ಕಿಗಳು…
    ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿವೆ….

    ಕಡಿಮೆ ಶಬ್ಧಗಳಲ್ಲಿ ಭಾವಗಳನ್ನು ಸಮರ್ಥವಾಗಿ ಸೆರೆಹಿಡಿದ್ದೀರಿ….
    ಅದು ಬಹಳ ಕಷ್ಟ…

    ಅಭಿನಂದನೆಗಳು..

    • 4
      svatimuttu Says:

      ಪ್ರಕಾಶ್ ಹೆಗಡೆ ಅವರೇ,
      ನನ್ನ ಹನಿಗಳಿಗೆ ನಿಮ್ಮ ಪ್ರತ್ಯುತ್ತರ ಓದಿ ತುಂಬಾ ಖುಷಿ ಆಯಿತು.. ಧನ್ಯವಾದಗಳು….

  3. 5
    guru Says:

    ಮೊದಲ ಪ್ರಯತ್ನದಲ್ಲೆ ಆಕಾಶದ ತುಂಬೆಲ್ಲಾ ಹನಿಗಳ ರಂಗೋಲಿ, ಮಳೆಹನಿ ಪ್ರಾರಂಭವಾಗಿದೆ, ಅದು ಸಮುದ್ರವಾಗಲೆಂದು ಹಾರೈಸುವೆ……………

    • 6
      svatimuttu Says:

      ಗುರು ಅಣ್ಣ,
      ಮೊದಲಿಗೆ ನೀವು ಹೇಳಿದ ಕೆಲಸ ಮಾಡಿದ್ದಕ್ಕೆ ಒಂದು ಕಾಣಿಕೆ ರೆಡಿ ಮಾಡಿ….
      ನಿಮ್ಮ ಅಭಿಪ್ರಾಯ ಹಿತವಾಗಿದೆ…
      ಧನ್ಯವಾದಗಳು….

  4. ಇಂಚರ,
    ಕಡಿಮೆ ಸಾಲುಗಳಲ್ಲಿ ಹೆಚ್ಚಿನದನ್ನು ಹೇಳೋ ಪ್ರಯತ್ನ, ಸೊಗಸಾಗಿ ಉದುರಿವೆ ಹನಿಗಳು…

  5. 9

    Hi Sh,

    Tumbaa chennagive. Nanage bahala ishtavaada hanigaLu :

    ಕಾಮನಬಿಲ್ಲು
    ಅವಳ ಬೆಚ್ಚನೆಯ ನೆನಪು
    ಚುಕ್ಕಿಗಳು
    ನನ್ನವನು
    All the best, heege munduvareyali hanigaLa surimaLe🙂

    • 10
      svatimuttu Says:

      ರೂಪ ಅಕ್ಕ,
      ಓದಿ ಹಾರೈಸಿದ್ದಕ್ಕೆ ಧನ್ಯವಾದಗಳು….

  6. 11
    shivu.k Says:

    ಈ ರೀತಿಯ ಚುಟುಕುಗಳೆಂದರೆ ನನಗೆ ತುಂಬಾ ಇಷ್ಟ.

    ಬಾಯಿಗೆ ಹಾಕಿಕೊಂಡ ತಕ್ಷಣ ಕರಗಿಹೋಗುವ ಪೆಪ್ಪರ್ ಮೆಂಟಿನಂತೆ. ಬಾಯಲ್ಲಿ ಇಲ್ಲದಿದ್ದರೂ ಅದರ ಸ್ವಾದ ಉಳಿಯುವಂತೆ ಈ ಚುಟುಕುಗಳನ್ನು ನೆನಪಾಗುತ್ತವೆ.

    ಪೈಪೋಟಿ, ಮತ್ತು ಕಾಮನಬಿಲ್ಲು ತುಂಬಾ ಇಷ್ಟವಾಯಿತು…

    • 12
      svatimuttu Says:

      ಶಿವು ಸರ್,
      ಹಾಗದರೆ ಪೆಪ್ಪರ್ ಮೆಂಟ್ ರುಚಿ ಹಾಗೆಯೇ ಸದಾ ಉಳಿಯಲಿ ನಿಮ್ಮ ಮನದಲ್ಲಿ..
      ಧನ್ಯವಾದಗಳು….

  7. 13

    Inchara,
    Hosa prayatna swagatarha…..
    Hanigalu mugdavaagi minugta ive…….:-) kushi kottive🙂
    Hage nange ansiddu….u can write better….next time ge kaaaytirtivi🙂
    All the best……🙂

    • 14
      svatimuttu Says:

      ಸುನಿಲ್ ಅವರೇ,
      ನಾನೇನೋ ಬರೆದೆ, ಈಗ ಅದನ್ನು ಮಿನುಗಿಸುತ, ಆ ಖುಷಿಯನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಕರ್ತವ್ಯ ನಿಮ್ಮದೂ ಸಹ….
      ಮುಂದೆ ಇನ್ನು ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ
      ಧನ್ಯವಾದಗಳು….

  8. ಮೊದಲ ಪ್ರಯತ್ನದಲ್ಲೇ ಚೆನ್ನಾಗಿ ಬರೆದಿದ್ದೀರಿ.. ಸ್ವಲ್ಪ ತೊದಲು ಅಲ್ಲಲ್ಲಿ ಸೂಕ್ಷ್ಮ ರೀತಿಯಲ್ಲಿವೆ… ಮುಂದೆ ಅವು ಸರಿಹೋಗುತ್ತವೆ, ಹೀಗೆ ಬರೆಯುತ್ತಿರಿ..

    –ಎ.ಕಾ.ಗುರುಪ್ರಸಾದಗೌಡ. ;www.balipashu.blogspot.com; hanebaraha@gmail.com.

  9. 17

    ಮೊದಲ ಪ್ರಯತ್ನ ಬೊಂಬಾಟ್. ಆದರೆ ನೀವು ಇನ್ನೂ ಚೆನ್ನಾಗಿ ಬರೆಯಬಹುದು ಅನ್ನಿಸುತ್ತದೆ.

    • 18
      svatimuttu Says:

      ಚಕೋರ ಅವರೇ,
      ಧನ್ಯವಾದಗಳು, ಮತ್ತೆ ಚೆನ್ನಗಿ ಬರೆಯಲು ಪ್ರಯತ್ನಿಸುತ್ತೇನೆ.


RSS Feed for this entry

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: