ನಾಚಿಕೆ
ಅಂದು ನಿನ್ನ ಮೊಗದಲ್ಲಿ
ನಗುವ ಕಂಡು
ಚಂದಿರನು ಸಾಗರದಲ್ಲಿ
ಕರಗಿಹೋದನು.
ಅಂತ್ಯ
ನೀನು ಹೋದ ಮರುಘಳಿಗೆಯೇ
ನನ್ನ ಪೆನ್ನು-ಪೇಪರ್
ಮೌನ ರಾಗದಲ್ಲಿ ಕರಗಿ ಹೋಯಿತು.
ಕುರುಡು
ಅವನು ಅಷ್ಟೂ ವಸಂತಗಳು
ನನ್ನೊಡನಿದ್ದನೆಂಬ ಭ್ರಮೆಯಲ್ಲಿ ಅವಿತು
ಅವನೊಡನೆ ಸುಂದರ ಭವಿಷ್ಯವ ಕೆತ್ತುವುದು.
ಮುಗ್ಧತೆ
ತನ್ನ ಪ್ರೀತಿಯ ತಾತ
ಸತ್ತಿದ್ದರೂ…
ಎಂದಿನಂತೆ ಅಂಗಳದಲ್ಲಿ ಆಡುತ್ತಿದ್ದಾರೆ
ಮೊಮ್ಮಕ್ಕಳು.
ಮೌನ ಸಂಭಾಷಣೆ
ಕಲ-ರವ ಸದ್ದಿನೊಡನೆ
ಝೇಂಕರಿಸುತ ಹರಿವ ಝರಿಯನ್ನು
ನೋಡುತ್ತಲೇ…..
ಅವಳು ತನ್ನ ನೋವನ್ನೆಲ್ಲಾ
ಮರೆತಬಿಟ್ಟಳು.
ಅವನ ಪತ್ರ
ಎಷ್ಟು ಕಾಡಿ ಬೇಡಿದರೂ
ಬರೆಯದವ ನೀನು…
ನನ್ನ ಮದುವೆಯ ದಿನ
ಬರೆದು ಕಳಿಸಿದ್ದಾದರೂ ಏತಕೆ?
ಇಂಚರ,
ಎಂದಿನಂತೆ ನಿಮ್ಮ ಚುಟುಕುಗಳೆಂದರೆ ನನಗಿಷ್ಟ….ತುಂಬಾ ಚೆನ್ನಾಗಿವೆ.
ಧನ್ಯವಾದಗಳು.. ಶಿವು ಸರ್
ಅವನ ಪತ್ರ
ಎಷ್ಟು ಕಾಡಿ ಬೇಡಿದರೂ
ಬರೆಯದವ ನೀನು…
ನನ್ನ ಮದುವೆಯ ದಿನ
ಬರೆದು ಕಳಿಸಿದ್ದಾದರೂ ಏತಕೆ?
nice one 🙂
ಧನ್ಯವಾದಗಳು ಅಣ್ಣ
hi Sh,
Soooooooooooooperb…. ondakinta ondu hanigaLu tumbaa chennaagive… ondu saalina kathegaLahaage… odida kooDale I was able to imagine the entire story….
U r improving a lot, good progress……… 🙂 heege munduvareyali kano.. 🙂
ಪ್ರೀತಿಯ ರೂಪ ಅಕ್ಕ,
ನಿಮ್ಮ ಅಭಿಪ್ರಾಯ ಓದಿ ತುಂಬಾ ಖುಷಿಯಾಯಿತು….. ನಾ ಅಂದುಕೊಂಡಿದ್ದೆ ಮೊದಲು ಹಾಕಿದ ಹನಿಗಳಷ್ಟು ಇವು ಚೆನ್ನಾಗಿರಲಿಲ್ಲ…. ಹಾಗಾಗಿ” ಕರಗಿ ಹೋಗಿದ್ದು” ಅನ್ನೋ ಹೆಸರಿನ ನಾಮಕರಣ ಮಾಡಿ ಹಾಕಿದೆ…… ನೋಡಿದರೆ ನೀವು ಚೆನ್ನಾಗಿದೆ ಅಂದಿದ್ದು ಆಶ್ಚರ್ಯವಾಯಿತು…
ಧನ್ಯವಾದಗಳು ಅಕ್ಕ
ಎಷ್ಟು ಕಾಡಿ ಬೇಡಿದರೂ
ಬರೆಯದವ ನೀನು…
ನನ್ನ ಮದುವೆಯ ದಿನ
ಬರೆದು ಕಳಿಸಿದ್ದಾದರೂ ಏತಕೆ?
ಅವನು ಅಷ್ಟೂ ವಸಂತಗಳು
ನನ್ನೊಡನಿದ್ದನೆಂಬ ಭ್ರಮೆಯಲ್ಲಿ ಅವಿತು
ಅವನೊಡನೆ ಸುಂದರ ಭವಿಷ್ಯವ ಕೆತ್ತುವುದು.
I think these 2 are bests… pratiyondu hanigalalliro bhaava manasige bahala hattira ansutte… tumbaa chennagide akka… improvement tumba clear aagi gottaagtide…. but we r all need so much from u… keep writing… gud luck…. 🙂 🙂
ಪ್ರೀತಿಯ ಅಚ್ಚು,
ನಿನ್ನ ಅಭಿಪ್ರಾಯ ಓದಿ ಸಂತೋಷವಾಯಿತು… ಇನ್ನೂ ಹೆಚ್ಚು-ಹೆಚ್ಚು ಬರೆಯುವ ಆಸೆ ಇದೆ.. ಬರೆಯುತ್ತಿರುತ್ತೇನೆ..
ಧನ್ಯವಾದಗಳು ಪುಟ್ಟಿ
ನಮಸ್ತೆ,
ತುಂಬಾ ಚೆನ್ನಾಗಿವೆ ಇಂಚರ.
‘ಕುರುಡು’ , ‘ಮುಗ್ಧತೆ’ ಹೆಚ್ಚು ಇಷ್ಟ ಆದ್ವು ನಂಗೆ.
ಅಭಿನಂದನೆಗಳು.
my Email id is : sunilanik@gmail.com
ಸುನಿಲ್ ಅವರೇ,
ಧನ್ಯವಾದಗಳು… ನಿಮ್ಮ ಪ್ರತಿಕ್ರೆಯೆ ನೋಡಿ ಸಂತೋಷವಾಯಿತು….
ಇಂಚರ,
ಎಲ್ಲವೂ ಸೊಗಸಾಗಿವೆ. ನಯವಾದ ಸಾಲುಗಳ ಸಂಯೋಜನೆ.
ರಾಜೇಶ್ ಅವರೇ,
ಧನ್ಯವಾದಗಳು…..:)
CHiiii Superb…………