ಅವಳ ಮನಸ್ಸಿಗೆ
ಅದೆಂತಹ ವಿಚಿತ್ರವಾದ
ಕಾರ್ಮೋಡ ಕವಿದಿತ್ತೆಂದರೆ
ಬಿರುಬಿಸಿಲು ಮನೆಯಂಗಳಕ್ಕೆ ನುಗ್ಗಿ
ರಾಜ್ಯಭಾರ ನಡೆಸುತ್ತಿದ್ದರೂ
ಮನೆ ತುಂಬ ದೀಪ ಹಚ್ಚಿ
ಶೂನ್ಯದತ್ತ ತಲೆಮಾಡಿ ಚಿಂತಿಸುತಿಹಳು.
ಅಮಾವಾಸ್ಯೆ
ಚಂದಿರನು ಭುವಿಯನ್ನು
ನೋಡುವ ತವಕದಲ್ಲಿ
ಬರುವಾಗ…..
ತನ್ನ ಬೆಳಕನ್ನೇ ಹೊತ್ತು
ತರುವುದನ್ನು ಮರೆತನು.
ಪುನರ್ಜನ್ಮ
ಎಲ್ಲೋ ನೋಡಿರುವಂತೆ
ಎಲ್ಲೋ ಆಡಿರುವಂತೆ
ಎಲ್ಲೋ ಈ ಮಧುರ ಧ್ವನಿಯ ಕೇಳಿರುವಂತೆ
ಎಂದೋ ಒಂದೇ ದೋಣಿಯ ನಾವಿಕರಾಗಿದ್ದಂತೆ
ಭಾಸವಾಯಿತು ನಿನ್ನ ಕಂಡ ಘಳಿಗೆ!
ಜಲಪಾತ
ತನ್ನ ಇನಿಯನ
ಅಗಲಿಕೆಯ ನೋವನ್ನು..
ಸಹಿಸಲಾರದೆಯೇ…
ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ.
ಮೌನ
ನಾನು ಬರೆದ
ನೂರಾರು ಪತ್ರಗಳಿಗೆ
ಇದೇ
ಅವನ ಉತ್ತರ!!!!
ಸ್ವಾತಿಮುತ್ತು
ಬರೆದ ಮುತ್ತುಗಳಿಗೆಲ್ಲಾ
ಎದೆಯ ಚಿಪ್ಪಿನೊಳಗೆ
ಸ್ಥಳಾವಕಾಶವಿಲ್ಲವೆಂದು
ನಿಶೇದಾಜ್ಞೆ ಜಾರಿ ಮಾಡಿ
entranceನಲ್ಲೇ ಜರಡಿ
ಹಿಡಿದು ನಿಂತಿದ್ದಾಳೆ.
Ellaanoo sakattaagide akka… 1st one tumbaa ista aaytu… 🙂 title tumbaa hidistu… jalapaatada bagge ayyo paapa anistu… 😉
superb job akka…. very nice…. 🙂
ಅಚ್ಚು,
ಎಷ್ಟೊಂದು smileys ಹಾಕಿಬಿಟ್ಟಿದ್ದೀಯಾ??? ನಿನ್ನ comment ಸಹಾ ನನಗೆ ಇಷ್ಟ ಆಯಿತು:)…
ಧನ್ಯವಾದಗಳು…..
ಪುನರ್ಜನ್ಮ ಚೆನ್ನಾಗಿದೆ…
ಮಂಜು
ಧನ್ಯವಾದಗಳು manju
Nice Inchanraji 😉
Thnaks Sunil
Thanks sunilji
ಚೆನ್ನಾಗಿದೆ..
ಧನ್ಯವಾದಗಳು