ಅಬ್ಬಾ! ಹಾಗೂ-ಹೀಗೂ ಅನ್ನುವಷ್ಟರಲ್ಲಿ ನನ್ನ ಸ್ವಾತಿಮುತ್ತಿಗೆ ಇಂದಿಗೆ ಒಂದು ವರುಷ ತುಂಬಿ ಬಿಟ್ಟಿದೆ. ದಿನಗಳು ಹೋದದ್ದೇ ಗೊತ್ತಾಗಲಿಲ್ಲ… ಮೊದಲ ಬಾರಿಗೆ ರಂಜಿತ್ ಅಣ್ಣನ ಬ್ಲಾಗು ನನ್ನನ್ನು ಆಕರ್ಷಿಸಿತು…. ಆಗಲಿಂದಲೂ ನನ್ನದೊಂದು ಬ್ಲಾಗು ತೆರೆಯುವ ಆಸೆ ಚಿಗುರತೊಡಗಿತು. ರಂಜಿತ್ ಅಣ್ಣ, ಸೋಮು ಇಬ್ಬರೂ ನನ್ನ ಬ್ಲಾಗನ್ನು ಕಟ್ಟಿ ಅಲಂಕರಿಸಿ ಕೈಗಿಟ್ಟರು… ಮುಂದಿನ ಜವಬ್ದಾರಿ ನನಗೆ ಶುರುವಾಯಿತು ನೋಡಿ…. ಮೊದಲಿಗೆ ಹೇಗೆ, ಏನು, ಎತ್ತ ಗೊತ್ತಿರಲಿಲ್ಲ…..ನಾ ಬರೆದ ಲೇಖನ, ಕವಿತೆಗಳಿಗೆ ಜೀವ ತುಂಬುವ ಪ್ರಯತ್ನ ಸರಾಗವಾಗಿ ಸಾಗುತ್ತಲೇ ಇತ್ತು… ನಿಮ್ಮೆಲ್ಲರ ಮನ ಮುಟ್ಟುವ ಹಾಗೆ ಬರೆದಾಗ ನನ್ನನ್ನು ಪ್ರೋತ್ಸಾಹಿಸಿ, ಹರಸಿದ್ದೀರಿ. ಎಡವಿದಾಗ ನನಗೆ ಕೈ ಜೋಡಿಸಿ ಸರಿ ದಾರಿಗೆ ಕರೆದು ನಡೆಸಿದ ಹಲವರಿಗೆ ನಿಜಕ್ಕೂ ನನ್ನ ತುಂಬು ಹೃದಯದ ಧನ್ಯವಾದಗಳು…. ಇಷ್ಟು ದಿನ ಬರೆದುದಕ್ಕಿಂತ ವಿಶೇಷವಾಗಿರುವುದನ್ನೇನಾದರೂ ಬರೆಯಿರಿ ಎಂದು ಬ್ಲಾಗಿನ ಗೆಳೆಯರು ಹೇಳಿದಾಗ ತಲೆ ಕೆಡಿಸಿಕೊಂಡು ಕುಳಿತಿದ್ದೆ..ಆಗ ನನ್ನ ಮನಸ್ಸಿಗೆ ಹೊಳೆದದ್ದು ಹನಿಗಳು ಬರೆಯುವ ಆಸೆ…. ಹೇಗೆ ಬಂತೋ ಗೊತ್ತಿಲ್ಲ.. ಅಂದುಕೊಳ್ಳುತ್ತಿದ್ದಂತೆ ಕೂತಿದ್ದಲ್ಲಿಯೇ ೨೦ ಹನಿಗಳನ್ನು ಒಂದಾದ ನಂತರ ಒಂದನ್ನು ಬರೆಯುತ್ತಾ ಹೋದೆ.. ಆ ಅನುಭವ ಅವಿಸ್ಮರಣೀಯವಾದುದು… ಸಾಧ್ಯವಾದಷ್ಟು ನಿಮ್ಮನ್ನೆಲ್ಲಾ ಮೆಚ್ಚಿಸುವ ಪ್ರಯತ್ನ ಮಾಡಿದ್ದೇನೆ… ಮುಂದೆಯೂ ಸದಾ ನಿಮನ್ನೆಲ್ಲಾ ರಂಜಿಸುವ, ಮನಕೆ ಮುದ ನೀಡುವ, ನಿಮ್ಮೆಲ್ಲರ ಹೃದಯದ ಕದವ ಮುಟ್ಟುವ ಬರವಣಿಗೆಗಳನ್ನು ನಿಮ್ಮ ಮುಂದೆ ಇಡುತ್ತೇನೆ… ಆದರೆ ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಸಲಹೆಗಳು ಅಗತ್ಯವಾಗಿ ನೀಡಿ , ಪ್ರೀತಿಯಿಂದಲೇ ನಿಮ್ಮ ಸಲಹೆಗಳನ್ನು ಸ್ವೀಕರಿಸಿ ಸ್ವಾತಿಮುತ್ತಿನ ಎದೆಯ ಚಿಪ್ಪಲಿ ಇನ್ನಷ್ಟು ಭಾವಗಳ ಇಬ್ಬನಿಯನ್ನು ಉದುರಿಸುವ ಯತ್ನ ಮಾಡುತ್ತೇನೆ.ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು. ಏನಪ್ಪ ಮಾತಿನಲ್ಲೇ ಹುಟ್ಟು ಹಬ್ಬದ ಆಚರಣೆ ಮುಗಿಸಿ ಬಿಟ್ಟಳು ಅಂತ ದಯಮಾಡಿ ಅಂದುಕೊಳ್ಳಬೇಡಿ.. ಮುಂದೆ ನಾ ನಿಮಗಾಗಿ ಓದಲು ನೀಡುವ ನನ್ನ ಬರಹಗಳಲ್ಲಿ ಸಿಹಿಯನ್ನು ತುಂಬಿ ಕೊಡುವೆ.. ಸ್ವೀಕರಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು…. ಆದರೂ ನಿಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ ನೀಡಲು ನಾ ಸದಾ ಸಿದ್ದಳಾಗಿರುತ್ತೇನೆ…. ಮತ್ತೆ ಬನ್ನಿ….
ನಿಮ್ಮ ಪ್ರೀತಿಯ,
ಇಂಚರ(ಸ್ವಾತಿಮುತ್ತು)
Congratulations. Happy Birthday to swatimuttu
Thanks alot Laxman
Great inchanraji 😉
Congratulations..:-)
Tumbane khushiyaagtide…:-)
Shubhavaagali 🙂
Sunil.
Thanks alot Sunilji………………….
Many more happy returns of the day swatimuttu……. 😉 happy birthday to you…. swatimuttu
[:)]Thank u ramu….
Happy birthday “swathimuttu”
Thank u guru anna..[:)]… Happy Birthday to u too….
ಓಹ್! ಆಗ್ಲೇ ವರ್ಷ ಆಗೋಯ್ತಾ?! ಕಂಗ್ರಾಟ್ಸ್!
ಮುಂದುವರಿಯಲಿ ಹೀಗೆ ಅಕ್ಷರಗಳ ಸಾಗರದಲಿ ಸ್ವಾತಿಮುತ್ತಿನ ಬೆಳ(ಬರ)ವಣಿಗೆಯ ಆಟ.
Thank u anna…:)……
ಇಂಚರ….
ತಡವಾದರೂ ಪರವಾಗಿಲ್ಲವೆಂದು ಅಭಿನಂದಿಸುತ್ತಿದ್ದೇನೆ. ಹಾರ್ದಿಕ ಶುಭಾಶಯಗಳು…. ನಿಮ್ಮ ಬರವಣಿಗೆ ನಿರಂತರವಾಗಿ ಸಾಗಲಿ………
ಶ್ಯಾಮಲ
‘svatimuttu’ ಅವರೇ..,
ಶುಭ ಆಶಯಗಳು..
ಹೊಸವರುಷದಿ,ಹೊಸಹರುಷದಿ… ಹೊಸಸವಿಯ ಜೇನಹನಿಗಾಗಿ ಕಾಯುತ್ತಿರುವೆ..
ನನ್ನ ‘ಮನಸಿನಮನೆ’ಗೆ…:http//manasinamane.blogspot.com
shubhaashayagaLu….
ಧನ್ಯವಾದಗಳು ರೂಪ
nimma baraha thumba chennagide ri.. bidvu maadikondu ella barahagalanna odthene
ಧನ್ಯವಾದಗಳು ಗೋಪಿರವರೇ… ಮತ್ತೆ ಸ್ವಾತಿಮುತ್ತಗೆ ಭೇಟಿ ನೀಡಿದ್ದಿರೇ????
ಲೇಖನ ಅದ್ಭುತವಾಗಿದೆ ಇದೇ ಮೊದಲಬಾರಿಗೆ ನಾನು ನಿಮ್ಮ ಬ್ಲಾಗಿಗೆ ಬೇಟಿ ಕೊಟ್ಟದ್ದು ತುಂಬಾ ಚೆನ್ನಾಗಿದೆ ಧನ್ಯವಾಗಿದೆ.
ವಸಂತ್
ತುಂಬಾ ಧನ್ಯವಾದಗಳು ವಸಂತ್
nimma lekanagalu bahala anda(chenda)vagi moodibandide, shubhashayagalu..