ಏಕಿಂದು ನಿನ್ನ ನೆನಪುಗಳು ನನ್ನ ಮನದ ದಡಕೆ
ರಾಶಿ-ರಾಶಿಯಾಗಿ ಬಂದು ಸಾಗುತಿವೆ …?
ಮರೆತಿಹೆನು ಎಂದುಕೊಂಡದ್ದೆಲ್ಲಾ
ಸಾಗರದಂತ್ಯದಲಿ ಚುಕ್ಕಿಗಳಂತೆ ಹೊಳೆಯುತಿವೆ…!
ಆ ಚಂದಿರನ ಮೊಗದಲ್ಲಿ
ನೀ ಏಕೆ ಕಂಡಿರುವೆ …?
ಇಷ್ಟು ದಿನಗಳ ಬಳಿಕ ಎಲ್ಲಿಂದ ಬಂದಿವೆ
ಈ ನೆನಪುಗಳ ಅಬ್ಬರ ನನ್ನ ಮನದ ದಡಕೆ ….?
**** ಕೆಲವು ತಿಂಗಳುಗಳಿಂದ ಸ್ವಾತಿಮುತ್ತಿಗೆ ಬೀಗ ಹಾಕಿ ಹೋಗಿದುದಕ್ಕಾಗಿ ಎಲ್ಲಾ ಓದುಗರಿಗೂ ಮೊದಲು ಕ್ಷಮೆಯಾಚಿಸುತ್ತಾ , ಮತ್ತೆ ಸ್ವಾತಿಮುತ್ತಿನಂಗಳಕೆ ನೆನಪನ್ನು ಮೊದಲಿಗೆ ಹಾಸಿ… ಮುಂದೆ ಸಾಗೋಣ ಎಂದು ತೀರ್ಮಾನಿಸಿ ಈ ಮೇಲಿನ ಸಾಲುಗಳನ್ನು ಬರೆದಿದ್ದೇನೆ… ಎಲ್ಲರೂ ಹಿಂದಿನಂತೆಯೇ ಈಗಲೂ ನನ್ನ ಪ್ರೋತ್ಸಾಹಿಸಿ ಸ್ವಾತಿಮುತ್ತನ್ನು ಮೆಚ್ಚುತ್ತೀರಿ ಎಂದು ನಂಬಿದ್ದೇನೆ….. ಧನ್ಯವಾದಗಳು.
-ಇಂಚರ