ನಿನ್ನಳಿದುಳಿದ ನೆನಪುಗಳ ಮಡಿಲಲ್ಲಿ
ಬೆಚ್ಹಗೆ ಮಲಗಿರುವೆ ನಾನು ಇಂದು
ಯೋಚಿಸುತಲಿ..
ದೂರ ತೀರದಲಿ ಬಿಟ್ಟು
ಹೋದೆ ಏಕೆ ಎಂದು?
ಎದೆಯ ಚಿಪ್ಪಲ್ಲಿ ಭಾವಗಳ ಇಬ್ಬನಿ!
ನಿನ್ನಳಿದುಳಿದ ನೆನಪುಗಳ ಮಡಿಲಲ್ಲಿ
ಬೆಚ್ಹಗೆ ಮಲಗಿರುವೆ ನಾನು ಇಂದು
ಯೋಚಿಸುತಲಿ..
ದೂರ ತೀರದಲಿ ಬಿಟ್ಟು
ಹೋದೆ ಏಕೆ ಎಂದು?
ಬೆಳಗು ಬಾ ಹಣತೆಯನು
ನನ್ನೆದೆಯ ಗುಡಿಯಲ್ಲಿ
ಚಿರಕಾಲ ಪ್ರಜ್ವಲಿಸುವ ಬೆಳಕಂತೆ…
ನೀನು ಬಂದುದರಿಂದ
ನನ್ನೆದೆಯ ಆನಂದ..ನರ್ತಿಸುತ
ಶೋಭಿಸುತಿದೆ ಮಳೆ ಬಂದ ಮರುದಿನದ
ಮುಂಬೆಳಗಿನಂತೆ …
ಬಯಕೆಗಳ ಹೂ-ಮುಳ್ಳಿನ ಹಾದಿಯಲ್ಲಿ
ನಡೆಯುತಿದೆ ಈ ಜೀವನ
ಮಿತಿಯಿಲ್ಲದ ಆಸೆಗಳ ಹೊತ್ತು
ಎಣೆಯಿಲ್ಲದಷ್ಟು ದುಃಖವ ಪಟ್ಟು
ಸಾಗರದಷ್ಟು ತಾಳ್ಮೆಯನಿಟ್ಟು
ಹೃದಯದ ಪ್ರೀತಿಯನ್ನು ಇತರರಲ್ಲಿಟ್ಟು
ಜೀವನವ ಸಾಗಿಸಿದರೆ ..
ಆಗ ಬಾಳು ಒಂದು ಸ್ವಾತಿಮುತ್ತು !
ಬೆಳ್ಳಿಯ ಬಾನಂಗಳದಲಿ
ಸ್ವಚವಾದ ವಾಹಿನಿಯಲಿ
ಹಚ್ಹಹಸಿರು ತುಂಬಿರುವ ವನದಲ್ಲಿ
ಆನಂದದಿಂದ ಬೆಳಗುತ್ತಿರುವ ಜ್ಯೋತಿಯಲಿ
ಮೈ ತಣಿಸುವ ಶಿಲ್ಪಕಲೆಗಳಲಿ
ಸುಮಧುರವಾದ ಗಾನದಲಿ
ಈ ನೆನಪಿನ ರಾಣಿಗಳು
ಅಂಧಕಾರದಲ್ಲಿ ಮುಳುಗಿದ್ದ
ಪುಷ್ಪದಂತೆ ಅರಳುವುವು…